Tuesday, May 7, 2024
spot_imgspot_img
spot_imgspot_img

ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಹತ್ತನೇ ತರಗತಿಯ ಪೋಷಕರ ಸಭೆ

- Advertisement -G L Acharya panikkar
- Advertisement -

ವಿದ್ಯಾರ್ಥಿಗಳ ಪ್ರಗತಿಯಲ್ಲಿ ಶಿಕ್ಷಕ ಮತ್ತು ಪೋಷಕರದ್ದೇ ಜೇಷ್ಠ ಸವಾಲುಗಳು – ಡಾ.ಟಿ.ಕೃಷ್ಣ ಮೂರ್ತಿ

ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಪೋಷಕರ ಸಭೆಯು ದಿನಾಂಕ 3.9.2023ರಂದು ಶಾಲಾ ಸಭಾಂಗಣ “ಜೇಸಿ ಪೆವಿಲಿಯನ್”ನಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾoಶುಪಾಲ ಡಾ. ಟಿ. ಕೃಷ್ಣ ಮೂರ್ತಿಯವರು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ಶಿಕ್ಷಕರ ಜೊತೆ ಪೋಷಕರು ಕೈ ಜೋಡಿಸುವುದು ಅಗತ್ಯ ಅಲ್ಲದೆ ವಿದ್ಯಾರ್ಥಿಯ ಸಮಯ ವಿನಿಯೋಗ ಮತ್ತು ಅಭ್ಯಾಸಕ್ಕಾಗಿ ಉತ್ತಮ ವಾತಾವರಣಕ್ಕೆ ಶಿಕ್ಷಕ ಮತ್ತು ಪೋಷಕ ವಿದ್ಯಾರ್ಥಿಯಷ್ಟೇ ಸವಾಲನ್ನು ಎದುರಿಸಬೇಕಾಗುತ್ತದೆ ಎಂದರು.

ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್ ಎನ್ ಕೂಡೂರುರವರು ಹೆತ್ತವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ರೂಡಿಸಿಕೊಂಡು,ಪ್ರತಿ ಮಗುವಿನ ಬಗ್ಗೆ ಕಾಳಜಿ ವಹಿಸುವುದಾಗಿ ಸಂತಸ ವ್ಯಕ್ತಪಡಿಸಿದರು. ಜತೆ ಕಾರ್ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ ರವರು SSLC ನಂತರ ವಿವಿಧ ವಿದ್ಯಾಭ್ಯಾಸದ ಬಗ್ಗೆ ತಿಳಿಸುತ್ತಾ ದೇಶದ ಸೇನೆಗಳಲ್ಲಿ ಸೇರಿಕೊಳ್ಳುವ ವಿಪುಲ ಅವಕಾಶಗಳನ್ನು ವಿವರಿಸಿದರು.

ಉಪಾಧ್ಯಕ್ಷ ಶ್ರೀಧರ್ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ್ ಶೆಟ್ಟಿ, ನಿರ್ದೇಶಕ ಹಸನ್ ವಿಟ್ಲ ಮತ್ತು ವಿಜಯ ಪಾಯಿಸ್,ಆಡಳಿತಾಧಿಕಾರಿ ರಾಧಾಕೃಷ್ಣ ಎ ಉಪಸ್ಥಿತರಿದ್ದರು. ಪ್ರಾಂಶುಪಾಲ ಜಯರಾಮ್ ರೈ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. SSLC ತರಗತಿ ಅಧ್ಯಾಪಕ ಗುರುವಪ್ಪ ನಾಯ್ಕ ವಿದ್ಯಾರ್ಥಿ ಪೋಷಕರಿಗೆ ಸಲಹೆ ಸೂಚನೆಗಳನ್ನಿತ್ತರು.ವಿದ್ಯಾರ್ಥಿ ಹೆತ್ತವರು ತಮ್ಮ ಮಕ್ಕಳ ಕಾಳಜಿ ಮತ್ತು ಶಾಲಾ ಆಭಿವೃದ್ಧಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಪ್ರಾರ್ಥನೆಯನ್ನು ಶಾಲಾ ವಿದ್ಯಾರ್ಥಿನಿಯರು ನಡೆಸಿಕೊಟ್ಟರು. ಶಿಕ್ಷಕಿ ತುಳಸಿ ಕಾರ್ಯಕ್ರಮ ನಿರೂಪಿಸಿದರು.SSLC ವಿಷಯವಾರು ಶಿಕ್ಷಕರು ಉಪಸ್ಥಿತರಿದ್ದು ಸಹಕರಿಸಿದರು.


- Advertisement -

Related news

error: Content is protected !!