Thursday, April 25, 2024
spot_imgspot_img
spot_imgspot_img

ವಿಠ್ಠಲ್ ಜೇಸಿಸ್ ಶಾಲೆ -ಗಾಂಧಿ ಜಯಂತಿ ಆಚರಣೆ

- Advertisement -G L Acharya panikkar
- Advertisement -

ವಿಟ್ಲ: ಮಹಾನ್ ಚೇತನ ಶಾಸ್ತ್ರೀಜಿ ಮತ್ತು ಗಾಂಧೀಜಿಯವರ ಜನ್ಮದಿನದ ಆಚರಣೆಯನ್ನು ಸರಕಾರಿ ನಿಯಮದಂತೆ ನಿಯಮಿತ ಶಿಕ್ಷಕರ ಜೊತೆ ಸೇರಿ 2.10.2020ರಂದು ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾಯಿತು.

ಮಹಾತ್ಮಗಾಂಧಿಯವರು ಸಾಂಕ್ರಾಮಿಕ ರೋಗಗಳ ತಡೆಗಟ್ಟುವಲ್ಲಿ ತೆಗೆದುಕೊಂಡ ಎಚ್ಚರ ಕ್ರಮಗಳು,ಹಾಗೂ “ನಮ್ಮ ಹೋರಾಟ ರೋಗದ ವಿರುದ್ಧ ರೋಗಿಯ ವಿರುದ್ಧವಲ್ಲ” ಎಂಬ ಹೇಳಿಕೆಗಳನ್ನು ಮೆಲುಕು ಹಾಕುತ್ತ ಪ್ರಸ್ತುತ ಸ್ಥಿತಿಗತಿಗೆ ಈ ನಿಲುವುಗಳ ಬಗ್ಗೆ ಗಮನ ಹರಿಸಬೇಕಾಗಿರುವುದು ಅನಿವಾರ್ಯ ಅಲ್ಲದೆ ಭಾರತದ ಹೊಸ ಭರವಸೆಯ ಹರಿಕಾರ ಶಾಸ್ತ್ರೀಜಿಯಂಥವರ ನಿಸ್ವಾರ್ಥ ಬದುಕು ಅನುಸರಣೀಯ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಯುತ ಜಯರಾಮ್ ರೈ ಯವರು ಸುದಿನದ ಪ್ರಾಮುಖ್ಯತೆಯನ್ನು ತಿಳಿಸಿದರು ಹಾಗೂ ಗಣ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಆಡಳಿತಾಧಿಕಾರಿ ರಾಧಾಕೃಷ್ಣ, ಉಪ ಪ್ರಾಂಶುಪಾಲರಾದ ಹೇಮಲತ ಹಾಗೂ ಶಿಕ್ಷಕರು ಉಪಸ್ಥಿತಿಯಲ್ಲಿದ್ದರು. ಪ್ರಧಾನಿ ಮೋದಿಯವರ ವಿಶೇಷ ಕಾರ್ಯಕ್ರಮ ಸ್ವಚ್ಛತಾ ಆಂದೋಲನಕ್ಕೆ ಪೂರಕವಾಗಿ ಶಾಲಾ ಸಿಬ್ಬಂದಿ ವರ್ಗದಿಂದ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

- Advertisement -

Related news

error: Content is protected !!