




ವಿಟ್ಲ: ಪುರುಷರ ವಿವಿಧ ವಿನ್ಯಾಸದ ಉಡುಪುಗಳನ್ನೊಳಗೊಂಡ ನೂತನ ಮಳಿಗೆ TRUE FIT (Unisex store) ವಿಟ್ಲದ ಸ್ಮಾರ್ಟ್ ಸಿಟಿ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.
ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ವಿಟ್ಲ ಟೌನ್ ಮಸೀದಿ ಖತೀಬ್ ಅಬ್ಬಾಸ್ ಮದನಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಲಯಾಲಂ ಚಿತ್ರ ನಟ ಅಫ್ಸಲ್ ಪಿ ಎಚ್ ಭಾಗವಹಿಸಿ ತಾರ ಮೆರುಗು ನೀಡಿದರು. ಕಾರ್ಯಕ್ರಮದಲ್ಲಿ ರಶೀದ್ ವಿಟ್ಲ, ಶಾಕೀರ್ ಅಳಕೆಮಜಲು, ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ, ಬ್ಲಾಕ್ ಕಾಂಗ್ರೇಸ್ ವಿಟ್ಲ ಅಧ್ಯಕ್ಷ ಪದ್ಮನಾಭ ಪೂಜಾರಿ, ಮಹಮ್ಮದ್ ಇಕ್ಬಾಲ್ ಹಾನೆಸ್ಟ್,ಅಬೂಬಕ್ಕರ್ ಅನಿಲಕಟ್ಟೆ, ರಹೀಮ್ ಕುಂಡಡ್ಕ, ಆಶಿಕ್ ಕುಟ್ಟಿ, ಹರ್ಷದ್ ಕುಕ್ಕಿಲ, ರವಿಪ್ರಕಾಶ್ , ಅಝೀಜ್ ಸನ, ಉದ್ಯಮಿ ಮನ್ಸೂರ್ ಕುಂಡಡ್ಕ ಉಪಸ್ಥಿತರಿದ್ದರು.

TRUE FIT ಡ್ರೆಸ್ ಮಳಿಗೆಯಲ್ಲಿ ಪುರುಷರಿಗೆ ಬೇಕಾಗುವ ಜೀನ್ಸ್, ಫಾರ್ಮಲ್, ಲಿನಿನ್, ಜಾಗರ್ ಟ್ರ್ಯಾಕ್ ಪ್ಯಾಂಟ್‌ಗಳು, ಶರ್ಟ್, ಟೀ ಶರ್ಟ್, ಜೆರ್ಸಿ, ಫರ್ಮ್ಯೂಮ್, ಬೆಲ್ಟ್, ಹಾಗೂ ಉತ್ತಮ ಗುಣಮಟ್ಟದ ಎಲ್ಲಾ ವಿನ್ಯಾಸದ ಉಡುಪುಗಳು ಲಭ್ಯವಿದೆ.









