Monday, July 20, 2026
spot_imgspot_img
spot_imgspot_img

ವಿಟ್ಲ: (ನ.9) ಹಿಂದೂ ಯುವಸೇನೆ ವಿಟ್ಲ ರಜತ ಮಹೋತ್ಸವದ ಪ್ರಯುಕ್ತ ಶ್ರೀ ಪಂಚಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

- Advertisement -
- Advertisement -

ವಿಟ್ಲ: ಹಿಂದೂ ಯುವಸೇನೆ ವಿಟ್ಲ ಇದರ ರಜತ ಮಹೋತ್ಸವದ ಪ್ರಯುಕ್ತ ಶ್ರೀ ಪಂಚಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ದಿನಾಂಕ: 09-11-2025ನೇ ಆದಿತ್ಯವಾರ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರ ವಿಟ್ಲದಲ್ಲಿ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಬಂಗಾರು ಅರಸರು ವಿಟ್ಲ ಅರಮನೆ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ವಿಟ್ಲ ಉದ್ಯಮಿ ಸುಬ್ರಾಯ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ವಿಧಾನ ಸಭಾ ಕ್ಷೇತ್ರ ಶಾಸಕ, ಉಡುಪಿ ಜಿಲ್ಲೆ ಹಿಂದೂ ಯುವಸೇನೆ ಮಾಜಿ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ ಗೌರವ ಉಪಸ್ಥಿತರಿರುವರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ವಿಧಾನ ಪರಿಷತ್ ಸದಸ್ಯ ದ.ಕ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಪುತ್ತೂರು, ಕೃಷ್ಣಯ್ಯ.ಕೆ, ವಿಟ್ಲ ಅರಮನೆ, ಸ್.ಎಲ್.ವಿ. ಬುಕ್‌ಹೌಸ್ ಇಂಡಿಯಾ ಪ್ರೈ. ಲಿ. ಮೈಸೂರು ಆಡಳಿತ ನಿರ್ದೇಶಕ ದಿವಾಕರ್ ದಾಸ್ ನೇರ್ಲಾಜೆ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು, ಮಂಗಳೂರು ಹಿಂದೂ ಯುವಸೇನೆ ಕೇಂದ್ರಿಯ ಮಂಡಳಿ ಗೌರವಾಧ್ಯಕ್ಷ ಭಾಸ್ಕರ್ ಚಂದ್ರ ಶೆಟ್ಟಿ, ಮಂಗಳೂರು ಹಿಂದೂ ಯುವಸೇನೆ ಕೇಂದ್ರಿಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಉದ್ಯಮಿ ಹಿಂದೂ ಯುವಸೇನೆ ವಿಟ್ಲ ಗೌರವ ಸಲಹೆಗಾರ ಹರೀಶ್ ನಾಯಕ್‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಯುವ ವಾಗ್ಮಿ ಲೇಖಕರು, ಬೆಂಗಳೂರು ಕುಮಾರಿ ಹಾರಿಕಾ ಮಂಜುನಾಥ್ ಧಾರ್ಮಿಕ ಭಾಷಣ ಮಾಡಲಿದ್ದಾರೆ.

ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ಬಳಿಕ 1:00ರಿಂದ ಅನ್ನ ಸಂತರ್ಪಣೆ ನಡೆಯಲಿದೆ.

ಅಪರಾಹ್ನ 3:00 ಗಂಟೆಗೆ “ಕುಸಾಲ್ದ ಗುರಿಕಾರೆ” ದಿನೇಶ್‌ ಕೋಡಪದವು ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರ ಸಮಾಗಮದೊಂದಿಗೆ ಯಕ್ಷಗಾನ ಹಾಸ್ಯ ನಾಟ್ಯ ವೈಭವ ನಡೆಯಲಿದೆ.

- Advertisement -

Related news

error: Content is protected !!