


ವಿಟ್ಲ: ಬಂಟರ ಸಂಘ (ರಿ) ಕೇಪು ಇದರ ನೂತನ ಸಮಿತಿಯ ಪದಗ್ರಹಣ ಸಮಾರಂಭವು ಜುಲೈ 27-07-2025ನೇ ಆದಿತ್ಯವಾರ ವಿಟ್ಲ ಗಾರ್ಡನ್ ಆಡಿಟೋರಿಯಂ ಕರವೀರ- ಮೈರದಲ್ಲಿ ನಡೆಯಿತು.
ಬೆಳಿಗ್ಗೆ 10:00 ಕ್ಕೆ ದೀಪ ಪ್ರಜ್ವಲನೆಯೊಂದಿಗೆ ನೃತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ 10: 45ರಿಂದ ಪದಗ್ರಹಣ ಮತ್ತು ಸಭಾ ಕಾರ್ಯಕ್ರಮ ಸಂಪನ್ನಗೊಂಡಿತು. ಸಮಾರಂಭದ ಅಧ್ಯಕ್ಷತೆಯನ್ನು ಕೇಪು ಬಂಟರ ಸಂಘದ ಅಧ್ಯಕ್ಷ ಜಗಜೀವನ್ ರಾಮ್ ಶೆಟ್ಟಿ ಬೇಡೇಮಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಯರಾಮ ರೈಯವರು ಮಾತನಾಡಿ” ಸಂಘದ ಪದಾಧಿಕಾರಿಗಳು ಸದಾ ಕ್ರಿಯಾಶೀಲರಾಗಿದ್ದಾಗ ಸಂಘದ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ಸಾಧ್ಯ”ಎಂದು ನುಡಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಭಾಸ್ಕರ ಶೆಟ್ಟಿ ವಿಟ್ಲ, ವಿಟ್ಲ ವಲಯ ಬಂಟರ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷ ರಾಜೀವ ಭಂಡಾರಿ ಕುಂಡಕೋಳಿ, ಕೇಪು ಗ್ರಾಮ ಬಂಟರ ಸಂಘದ ನಿಯೋಜಿತ ಅಧ್ಯಕ್ಷ ತಾರಾನಾಥ ಆಳ್ವ, ತಾಲೂಕು ಬಂಟರ ಸಂಘದ ಇ.ಸಿ ಸದಸ್ಯರುಗಳಾದ ಶಿವಾನಂದ ರೈ ಕೊಲ್ಯ, ಶ್ರೀಮತಿ ಗೀತಲತಾ ವಿಟ್ಲ ವಲಯ ಬಂಟರ ಸಂಘದ ಮಹಿಳಾ ಅಧ್ಯಕ್ಷೆ ಶ್ರೀಮತಿ ಶಿವಾನಿ. ಬಿ. ಶೆಟ್ಟಿ ವಿಟ್ಲ , ಕೇಪು ಬಂಟರ ಸಂಘದ ಮಹಿಳಾ ಅಧ್ಯಕ್ಷೆ ಶ್ರೀಮತಿ ಸರಿತಾ ಶೆಟ್ಟಿ ಕುಕ್ಕೆಬೆಟ್ಟು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂತನ ಸಮಿತಿಯ ಪದಗ್ರಹಣ ಏರ್ಪಡಿಸಿ, ನೂತನ ಸಮಿತಿಯ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಗುರಿಕಾರರಾದ ನಿವಾಸ ರೈ ಕುಂಡಕೋಳಿ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೇಪು ಗ್ರಾಮ ಯುವ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮೈರ ಸನ್ಮಾನ ಪತ್ರ ವಾಚಿಸಿದರು. ಸಂತೋಷ್ ಆಳ್ವ ಚೆಲ್ಲಡ್ಕ ಇವರ ಮಗುವಿನ ಚಿಕಿತ್ಸೆಗಾಗಿ ಹಾಗೂ ಶ್ರೀಮತಿ ಪ್ರೇಮಲತಾ ಕುದ್ದುಪದವು ಇವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ವಿತರಿಸಲಾಯಿತು.

ಕಾರ್ಯಕ್ರಮವನ್ನು ಜತೆ ಕಾರ್ಯದರ್ಶಿ ಸಂದೀಪ್ ರೈ ಕಲ್ಲಂಗಳ ಪ್ರಾರ್ಥಿಸಿ, ನಿಯೋಜಿತ ಅಧ್ಯಕ್ಷ ತಾರಾನಾಥ ಆಳ್ವ ಕುಕ್ಕೆಬೆಟ್ಟು ಸ್ವಾಗತಿಸಿದರು. ಕೋಶಾಧಿಕಾರಿ ಉದಯ ಕುಮಾರ್ ರೈ ಕಂಬಳದಡ್ಡ ವಂದಿಸಿದರು. ಸುರೇಶ್ ಶೆಟ್ಟಿ ಪಡಿಬಾಗಿಲು ಕಾರ್ಯಕ್ರಮ ನಿರೂಪಿಸಿದರು.ಕೇಪು ಬಂಟರ ಸಂಘದ ಕಾರ್ಯದರ್ಶಿ ಸತೀಶ್ ರೈ ಮೈರ ಕಾರ್ಯಕ್ರಮ ಸಂಯೋಜಿಸಿದರು.
ಬಳಿಕ ಪ್ರಖ್ಯಾತ ಯುವ ಭಾಗವತ ಪ್ರಖ್ಯಾತ್ ಶೆಟ್ಟಿ ಅಳಿಕೆ ತಂಡದವರಿಂದ ಯಕ್ಷ-ರಸ-ಹಾಸ್ಯ ಕಾರ್ಯಕ್ರಮ ಮೂಡಿಬಂದಿತು. ಸಹಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಇದರ ಪ್ರಾಯೋಜಕತ್ವವನ್ನು ಕೀರ್ತಿಶೇಷ ಕಲ್ಲಂಗಳ ಗುತ್ತು ಶ್ರೀಮತಿ ಮತ್ತು ಶ್ರೀ ವಾಸಪ್ಪ ಪೆರ್ಗಡೆಯವರ ಮಕ್ಕಳು ವಹಿಸಿದ್ದರು.








