- Advertisement -
- Advertisement -




ವಿಟ್ಲ: ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಲಾಯಿಸಿ ಅಪಘಾತ ಮಾಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಮಾಲಕನಿಗೆ 32000 ರೂ, ದಂಡ ವಿಧಿಸಿದೆ.
ದ್ವಿಚಕ್ರ ವಾಹನಕ್ಕೆ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಇನ್ನೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಅಪಘಾತವಾಗಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..
ಅಕ್ರ 74/2025 ಕಲಂ: U/s: 281,125(a) BNS and U/s: 4(1),181,146,196,199 A (1) , 190(2) IMV Act and U/s: 115CMV Rule ಪ್ರಕರಣಕ್ಕೆ ಸಂಬಂದಿಸಿದಂತೆ ಅಪ್ರಾಪ್ತ ಪ್ರಾಯದ ಬಾಲಕ KA-19-S-9666ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಚಲಾಯಿಸಿ ಅಪಾಘಾತ ಪಡಿಸಿದ್ದಾನೆ. ಈ ಬಗ್ಗೆ ಮಾನ್ಯ ಎಸಿ ಜೆ ಮತ್ತು ಜೆ ಎಂ ಎಪ್ ಸಿ ನ್ಯಾಯಾಲಯ ಬಂಟ್ವಾಳದರವರ ಸಿಸಿ ನಂಬ್ರ:1766/2025 ರಂತೆ ವಿಚಾರಣೆ ಗೊಂಡು ದಿನಾಂಕ: 26.09.2025 ರಂದು ಆರೋಪಿ ವಾಹನದ ಆರ್ ಸಿ ಮಾಲಕ ಮಹಮ್ಮದ್ ಅನೀಸ್ ರವರಿಗೆ 32000 ರೂ, ದಂಡ ವಿಧಿಸಿದೆ.
- Advertisement -








