- Advertisement -
- Advertisement -





ವಿಟ್ಲ: ವಿಟ್ಲದ ಸುಪ್ರಸಿದ್ಧ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ ಶ್ರೀನಿವಾಸ ಶೆಟ್ಟಿ ಕೊಲ್ಯ ಇವರ ಕಲಾಸೇವೆಗೆ 2025-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ಶ್ರೀನಿವಾಸ ಶೆಟ್ಟಿ ಕೊಲ್ಯರವರು ಮೂಲತಃ ದ ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಮೂಲದ ಕೊಲ್ಯದವರು. ರಂಗಭೂಮಿಯಲ್ಲಿ ಹವ್ಯಾಸಿ ಕಲಾವಿದರಾಗಿ ರಂಗಭೂಮಿಯತ್ತ ಪಾದಾರ್ಪಣೆ ಗೈದ ಇವರ ಕಲಾಜರ್ನಿ ಮುಂದಕ್ಕೆ ಅನೇಕ ತುಳು ಸಿನಿಮಾಗಳಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟಿತ್ತು.
ಅನೇಕ ತುಳು ಕನ್ನಡ ನಾಟಕಗಳಲ್ಲಿ ಅನೇಕ ಪಾತ್ರಗಳಲ್ಲಿ ಮಿಂಚಿದ ಇವರು ಕೋಸ್ಟಲ್‌ವುಡ್‌ನ ಸೂಪರ್ ಹಿಟ್ ಚಲನಚಿತ್ರಗಳಲ್ಲಿ ಅಭಿನಯಿಸಿ ಕಲಾ ಪ್ರೇಕ್ಷಕರಿಂದ ಸೈ ಎನಿಸಿಕೊಡಿದ್ದಾರೆ. ಇದೀಗ ಇವರ ಕಲಾ ಸೇವೆಗೆ 2025-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒದಗಿಬಂದಿದ್ದು, ಇವರ ಕಲಾಸೇವೆಗೆ ಸಿಕ್ಕ ಗೌರವ.
- Advertisement -








