ವೀರರಾಣಿ ಅಬ್ಬಕ್ಕರವರ 500ನೇ ವರ್ಷದ ಜನ್ಮ ದಿನಾಚರಣೆಯ ಪ್ರಯುಕ್ತ 100 ಉಪನ್ಯಾಸಗಳ ಸರಣಿಯ 88ನೇ ಎಸಳಿನ ಉಪನ್ಯಾಸ ಕಾರ್ಯಕ್ರಮ




ವಿಟ್ಲ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ )ಮಂಗಳೂರು ವಿಭಾಗ ಮತ್ತು ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಇವರ ಸಹಯೋಗದಲ್ಲಿ ತುಳುನಾಡಿನ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಾದ ವೀರರಾಣಿ ಅಬ್ಬಕ್ಕ ಇವರ 500ನೇ ವರ್ಷದ ಜನ್ಮದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿಯ 88ನೇ ಎಸಳಿನ ಉಪನ್ಯಾಸ ಕಾರ್ಯಕ್ರಮವನ್ನು ವಿಠಲ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಗೊಸೇವಾ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತದ ಸಂಯೋಜಕ ಪ್ರವೀಣ ಸರಳಾಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುವ ಜೊತೆಗೆ ಎಲ್ಲಾ ಗಣ್ಯರು ಸರಸ್ವತಿ ಮಾತೆ ಮತ್ತು ಅಬ್ಬಕ್ಕ ರಾಣಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕನ್ನಡ ಉಪನ್ಯಾಸಕಿ ಡಾ. ಮೈತ್ರೀ ಭಟ್ ಇವರು, ಇತಿಹಾಸದ ಪುಟದಲ್ಲಿ ಮರೆಯಾಗಿರುವ ವೀರರಾಣಿ ಅಬ್ಬಕ್ಕರವರ ಜೀವನ ಚರಿತ್ರೆಯನ್ನು ಪ್ರೇರಣೆಯಾಗಿಟ್ಟುಕೊಂಡು ಪ್ರಸ್ತುತ ಯುವವಿದ್ಯಾರ್ಥಿ ಸಮುದಾಯ ದೇಶಪ್ರೇಮವನ್ನು ಮೈಗೂಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ವಿಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಮುಖ್ಯಅತಿಥಿಗಳಾಗಿ ಸಂಸ್ಥೆಯ ಅರ್ಥಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕಿಯಾದ ಶ್ರೀಮತಿ ಚಂದ್ರಕಲಾ ಕೆ. ಸಿ ಮತ್ತು ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.

ಮಿಲಾಗ್ರೀಸ್ ಕಾಲೇಜಿನ ಕನ್ನಡ ಉಪನ್ಯಾಸಕಿ ಮತ್ತು KRMSS ಮಂಗಳೂರು ವಿಭಾಗದ ಸಂಯೋಜಕಿಯಾದ ಶ್ರೀಮತಿ ಮಮತಾ ಶೆಟ್ಟಿ ಪ್ರಾಸ್ತವಿಕ ಭಾಷಣಗೈದರು.ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ಅಣ್ಣಪ್ಪ ಶಾಸ್ತಾನ ಸ್ವಾಗತಿಸಿ, ಉಪನ್ಯಾಸಕರಾದ ಶ್ರೀಮತಿ ರಕ್ಷಿತಾ ರೈ ಕಾರ್ಯಕ್ರಮ ನಿರೂಪಿಸಿ, ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಮಾಧವ್ ವಿ ಎಸ್ ವಂದಿಸಿದರು.








