Monday, March 8, 2021

ಹೆಚ್ ಟಿ ಎಫ್ ಸಿ ಟಿಪ್ಪು ನಗರ ಇದರ ವತಿಯಿಂದ 72ನೇ ಗಣರಾಜ್ಯೋತ್ಸವ ದಿನಾಚರಣೆ

ವಿಟ್ಲ: ಹಝ್ರತ್ ಟಿಪ್ಪು ಸುಲ್ತಾನ್ ಫ್ರೆಂಡ್ಸ್ ಕಮಿಟಿ (ಹೆಚ್ ಟಿ ಎಫ್ ಸಿ ) ಟಿಪ್ಪುನಗರ – ಕೊಡಂಗಾಯಿ ಇದರ ಆಶ್ರಯದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸಲಾಯಿತು.

ಸುಸಜ್ಜಿತ ಸಮಾಜ ನಿರ್ಮಾಣದ ಸಂಕಲ್ಪ ತೊಟ್ಟುಕೊಂಡು ರೂಪಿಸಲಾದ ಈ ಸಂಘಟನೆಯು ಕಳೆದ ಹಲವು ವರ್ಷಗಳಿಂದ ಬಡವರ ಬದುಕಲ್ಲಿ ಸದಾ ಆಸರೆಯಾಗಿ , ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಚರಿಸುತ್ತಾ ಬರುತ್ತಿದೆ.

ಸಂಘದ ಅಧ್ಯಕ್ಷರಾದ ಕೆ. ಎಸ್ . ಶಮೀರ್ ಖಲೀಫಾ ಅಬುಧಾಬಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ರಾದುಕಟ್ಟೆ ಕೆ. ಎ. ಹಸೈನಾರ್ ಮುಸ್ಲಿಯಾರ್ ದುಆ ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ತಾಜುದ್ದೀನ್ ಸ್ವಾಗತಿಸಿದರು.

ಎಂ . ಜೆ. ಎಮ್ ಕೊಡಂಗಾಯಿ ಮಾಜಿ ಅಧ್ಯಕ್ಷರಾದ ಆದಮ್ ಕುಞ್ಞಿ ನೆಡ್ಯಾಳ, ಕೆ. ಎಸ್. ಸುಲೈಮಾನ್ , ಹಮೀದ್ ಎಂ, ಮಾಮು , ಎವೈಎಫ್ ಕಾರ್ಯದರ್ಶಿ ಟಿ. ಎಂ. ಮಜೀದ್ , ಕೆ.ಎಂ. ಎ. ಮುಹಮ್ಮದ್ , ಅಬ್ದುಲ್ ಖಾದರ್ ಪಿ, ಕಾರ್ಯದರ್ಶಿ ನಿಷಾದ್ ಎಬಿ, ಹಾಗೂ ರಾಶಿಕ್ ಜೆಟಿ ಕಾರ್ಯದರ್ಶಿ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಸಮಾರಂಭವನ್ನು ಸ್ಥಳೀಯ ಪಂಚಾಯತ್ ಸದಸ್ಯರಾದ ಸಂದೇಶ್ ಶೆಟ್ಟಿ ಬಿಕ್ನಾಜೆಯವರು ಉದ್ಘಾಟಿಸಿದರು.

ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತಿರುವ ಭಾರತದ ಸುಂದರ , ಸುರಮ್ಯ ಪರಂಪರೆಯನ್ನು ಉಳಿಸಲು ಇಂತಹ ಸಂಘಟನೆ ಹಾಗೂ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಸಂದೇಶ್ ಶೆಟ್ಟಿಯವರು ನುಡಿದರು. ಹೆಚ್ ಟಿ ಎಫ್ ಸಿ ಜ್ಯೂನಿಯರ್ ಟೀಮ್ ನಾಯಕ ಉಬೈದ್ ಧನ್ಯವಾದ ಸಮರ್ಪಿಸಿದರು.

- Advertisement -

MOST POPULAR

HOT NEWS

Related news

error: Content is protected !!