Thursday, May 9, 2024
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸೀಸ್ ಶಾಲೆ: 2023-24 ನೇ ಶೈಕ್ಷಣಿಕ ವರ್ಷದ ಪೋಷಕರ ಸಭೆ

- Advertisement -G L Acharya panikkar
- Advertisement -

ಶಾಲೆಯ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ, ಆಡಳಿತ ಮಂಡಳಿ, ಪೋಷಕರ ಮತ್ತು ಶಿಕ್ಷಕರ ಸಭೆಯನ್ನು ದಿನಾಂಕ 10-02-2024 ಮತ್ತು11-02-24ರಂದು ಹಮ್ಮಿಕೊಳ್ಳಲಾಗಿತ್ತು.

ಮೂರು ವಿಭಾಗಳಲ್ಲಿ ನಡೆದ ಸಮಾಲೋಚನೆಯ ಸಂಪನ್ಮೂಲ ವ್ಯಕ್ತಿಗಳು ಕ್ರಮವಾಗಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಗೋಪಾಲಕೃಷ್ಣ ನೇರಳಕಟ್ಟೆ, ಬಂಟ್ವಾಳ ಮಕ್ಕಳಲೋಕದ ಗೌರವ ಸಲಹೆಗಾರರಾದ ಭಾಸ್ಕರ ಅಡ್ವಾಳ ಹಾಗೂ ಶಿಕ್ಷಕರಾದ ಪಿ ಎಸ್ ಜಯಪ್ರಕಾಶ್ ರವರು ಹೆತ್ತವರ ಜವಾಬ್ಧಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ಆಧುನಿಕ ಇಲೆಕ್ಟ್ರಾನಿಕ್ ತಂತ್ರಜ್ಞಾನಗಳಿಗೆ ಮೊರೆಹೋಗುತ್ತಾ ಪುಸ್ತಕ ಅಭ್ಯಾಸದ ಕಡೆಗಣನೆಗೆಯಾಗುತ್ತಿದೆ ಈ ನಿಟ್ಟಿನಲ್ಲಿ ಜೊತೆಗಿರುವ ಹೆತ್ತವರು ಹಾಗೂ ಶಿಕ್ಷಕರು ತಿಳಿಹೇಳಬೇಕಾಗಿದೆ, ಮಕ್ಕಳ ಬೆಳವಣಿಗೆ ಹೇಳಿ ಮಾಡಿಸುವುದಕ್ಕಿಂತ ಮಾಡಿ ತೋರಿಸುವುದರಲ್ಲಿ ಪರಿಣಾಮಕಾರಿ, ವಿದ್ಯಾರ್ಥಿಗಳ ಪರೀಕ್ಷಾ ತಯಾರಿಯಲ್ಲಿ ಪೋಷಕರು ಸೂಕ್ತ ವಾತಾವರಣದ ಸೃಷ್ಟಿಗಾಗಿ ವೃತದಂತೆ ಸಹಕರಿಸಬೇಕಾಗುತ್ತದೆ, ಹಿಂದೆ ನಡೆದ ಸಾಧಕರ ಸಾಧನೆಯ ಹಾದಿಗಳ ಇತಿಹಾಸ ವಿದ್ಯಾರ್ಥಿಗಳ ಓದಿಗೆ ಪೂರಕವಾಗಬಹುದು ಎಂಬ ಸಂಪನ್ಮೂಲ ಮಾತುಗಳು ಪೋಷಕರಿಗೆ ಸ್ಫೂರ್ತಿ ನೀಡಿತು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್.ಎನ್.ಕೂಡೂರು ರವರು ಶಾಲಾ ವಿದ್ಯಾರ್ಥಿಗಳ ಸಂಸ್ಕಾರ ಮತ್ತು ಭಾಷಾ ನೈಪುಣ್ಯತೆಗಳ ಮತ್ತು ಶೈಕ್ಷಣಿಕ ಚಟುವಟಿಕೆಗಳ ಸಾಧನೆಗಳನ್ನು ನೆನಪಿಸಿ ಪೋಷಕರ ಪ್ರೋತ್ಸಾಹಕ್ಕೆ ಅಭಿನಂದನೆ ಸಲ್ಲಿಸಿದರು.
ಶಾಲೆಯ ಪ್ರಾಂಶುಪಾಲರಾದ ಜಯರಾಮ್ ರೈ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್ ಕುಕ್ಕಿಲ, ಹಿರಿಯ ನಿರ್ದೇಶಕರಾದ ಮೋನಪ್ಪ ಶೆಟ್ಟಿ, ಶಾಲಾ ಆಡಳಿತ ಅಧಿಕಾರಿ ರಾಧಾಕೃಷ್ಣ ಎ, ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು.
ಕ್ರಮವಾಗಿ ಸಹ ಶಿಕ್ಷಕಿಯರಾದ ರಶ್ಮಿ ಕೆ ಎನ್ , ತೇಜಸ್ವಿನಿ ಹಾಗೂ ಲಾವಣ್ಯ ಪ್ರಾರ್ಥಿಸಿದರು.
ಸಹ ಶಿಕ್ಷಕರಾದ ಗುರುವಪ್ಪ ನಾಯ್ಕ್, ಸಹ ಶಿಕ್ಷಕಿಯರಾದ ಗೀತಾ, ಸಂಧ್ಯಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಕ್ಷಕ ಶಿಕ್ಷಕೇತರ ವೃಂದವು ಸಹಕರಿಸಿದರು. ಸುಮಾರು 800 ಪೋಷಕರು ಭಾಗವಹಿಸಿದ್ದರು.

- Advertisement -

Related news

error: Content is protected !!