Tuesday, July 21, 2026
spot_imgspot_img
spot_imgspot_img

ವಿಟ್ಲ: ಎಸ್‌ಎಸ್ಎಲ್ ಸಿ ಪರೀಕ್ಷೆಯಲ್ಲಿ ಪಿಎಂ ಶ್ರೀ ಸರಕಾರಿ ಪ್ರೌಢಶಾಲೆಗೆ(RMSA) 99.2% ಫಲಿತಾಂಶ

- Advertisement -
- Advertisement -

ವಿಟ್ಲ: 2025-26ನೇ ಶೈಕ್ಷಣಿಕ ಸಾಲಿನ SSLC ವಾರ್ಷಿಕ ಪರೀಕ್ಷೆಗೆ ಪಿಎಂ ಶ್ರೀ ಸರಕಾರಿ ಪ್ರೌಢಶಾಲೆ ಆರ್‌ಎಂಎಸ್ ಎ ವಿಟ್ಲ ಇಲ್ಲಿನ 122 ವಿದ್ಯಾರ್ಥಿಗಳು ಹಾಜರಾಗಿದ್ದು, 121ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

625ರಲ್ಲಿ 612ಅಂಕಗಳನ್ನು ಗಳಿಸಿದ ಶ್ರೇಯಾ(ಕಂಬಳಬೆಟ್ಟಿನ ಶ್ರೀಕೃಪಾ ಮತ್ತು ಮಹೇಶ್ ದಂಪತಿಯ ಪುತ್ರಿ)ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾಳೆ.( ಬಾಕ್ರಬೈಲ್ ಸದಾಶಿವಶೆಟ್ಟಿ ಪ್ರತಿಮಾ ದಂಪತಿಯ ಪುತ್ರಿ)ಸಾನ್ವಿ ರೈ 611ಅಂಕಗಳು, ಮಹ್ನಾ ಖತೀಜಾ ಖಾದರ್(ಒಕ್ಕೆತ್ತೂರಿನ ಅಬ್ದುಲ್ ಖಾದರ್ ರಶೀದಾ ದಂಪತಿಗಳ ಪುತ್ರಿ)609ಅಂಕಗಳನ್ನೂ, ತ್ರಿಶಾ(ಕಬ್ಬಿಣಹಿತ್ಲು ನಿವಾಸಿಗಳಾದ ಸುರೇಶ್ ಶೋಭಾ ದಂಪತಿಯ ಪುತ್ರಿ) 607ಅಂಕಗಳನ್ನೂ ಮನಸ್ವಿ ಕೆ ಆರ್(ಕೂಜಪಾಡಿಯ ರಾಧಾಕೃಷ್ಣ ಮೋಹಿನಿಯ ಪುತ್ರಿ)605ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

122ರಲ್ಲಿ 33 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲೂ, 54 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ, 18ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲೂ, 16 ವಿದ್ಯಾರ್ಥಿಗಳು ಉತ್ತೀರ್ಣ ಅಂಕಗಳನ್ನೂ ಗಳಿಸಿ ಶಾಲೆಯ ಫಲಿತಾಂಶ 99.2,% ದಾಖಲಾಗಿರುತ್ತದೆ

- Advertisement -

Related news

error: Content is protected !!