Tuesday, April 30, 2024
spot_imgspot_img
spot_imgspot_img

ವಿಟ್ಲ: ಭಾರೀ ಮಳೆಗೆ ರಸ್ತೆ ಮೇಲೆ ಕುಸಿದು ಬಿದ್ದ ಗುಡ್ಡ; ಸಂಚಾರ ಅಸ್ತವ್ಯಸ್ತ

- Advertisement -G L Acharya panikkar
- Advertisement -

ವಿಟ್ಲ: ಕರಾವಳಿಯಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು ಗುರುವಾರವೂ ಮಳೆಯ ಆರ್ಭಟ ಮುಂದುವರಿದಿದೆ. ಅಲ್ಲಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ಥವಾಗಿರುವ ಬೆನ್ನಲ್ಲೇ ಇದೀಗ, ವಿಟ್ಲ-ಮಂಗಳೂರು ರಸ್ತೆಯ ವೀರಕಂಭ ಸಮೀಪ ಗುಡ್ಡವೊಂದು ರಸ್ತೆಗೆ ಕುಸಿದು ಬಿದ್ದಿದ್ದು ವಾಹನ ಸವಾರರು ಪರದಾಡುವಂತಾಗಿದೆ.

ವೀರಕಂಭ ಶಾಲೆ ಸಮೀಪ ಗುಡ್ಡವೊಂದು ಕುಸಿದು ಬಿದ್ದು ರಸ್ತೆ ತುಂಬೆಲ್ಲಾ ನೀರು ಹರಿದಾಡುತ್ತಿದ್ದು ವಾಹನ ಸವಾರರ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್‌ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Related news

error: Content is protected !!