Sunday, June 29, 2025
spot_imgspot_img
spot_imgspot_img

ವಿಟ್ಲ: ದ್ವಿಚಕ್ರ ವಾಹನದಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡ ಮಹಿಳೆ ಸಾವು

- Advertisement -
- Advertisement -

ವಿಟ್ಲ: ದ್ವಿಚಕ್ರ ವಾಹನದಿಂದ ಸಹಸವಾರ ನಿಯಂತ್ರಣ ತಪ್ಪಿ ರಸ್ತೆ ಬಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವಿಟ್ಲ ಕಸಬ ಗ್ರಾಮದ ಸೇರಾಜೆ ಎಂಬಲ್ಲಿ ನಡೆದಿದೆ. ವಿಟ್ಲ ಕಸಬಾದ ಸೇರಾಜೆ ನಿವಾಸಿ ರುಫಿನಾ ಕೋಸೆಸ್ ಪಿಂಟೋ(52) ಮೃತಪಟ್ಟ ಮಹಿಳೆ.

ಮಾಸ್ಟ್ರೋ ದ್ವಿಚಕ್ರ ವಾಹನದಲ್ಲಿ ಸವಾರ ಜಯರಾಮ ಎಸ್ ಅವರು ಪರಿಚಯದ ರುಫಿನಾ ಕೋಸೆಸ್ ಪಿಂಟೋ(52) ರವರನ್ನು ಕೂರಿಸಿ ತೆರಳುತ್ತಿದ್ದ ವೇಳೆ ಸಹಸವಾರ ರುಫಿನಾ ಕೋಸೆಸ್ ಪಿಂಟೋ ಅವರು ಹತೋಟಿ ತಪ್ಪಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದು, ಇದರಿಂದ ಅವರ ತಲೆಯ ಹಿಂಬದಿ, ಬಾಯಿಗೆ, ಹಣೆಯ ಎದುರು ಭಾಗ ತೀವ್ರ ತರವಾದ ಗಾಯಗೊಂಡಿದ್ದು ತಕ್ಷಣವೇ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.

ಗಾಯಾಳು ರುಫಿನಾ ಕೋಸೆಸ್ ಪಿಂಟೋರವರು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾರೆ.

ಕಾನೂನಿನ ಅರಿವು ತಿಳಿಯದ ಕಾರಣ ಮಹಮ್ಮದ್ ಶಾಫಿ ಗಮಿ ಅವರ ಮೂಲಕ ಠಾಣೆಗೆ ಬಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!