Tuesday, May 7, 2024
spot_imgspot_img
spot_imgspot_img

ಮದುವೆ ಮೊದಲೇ ವರದಕ್ಷಿಣೆ ಕಿರುಕುಳ; ಆತ್ಮಹತ್ಯೆಗೆ ಶರಣಾದ ಕಾನೂನು ವಿದ್ಯಾರ್ಥಿನಿ..!

- Advertisement -G L Acharya panikkar
- Advertisement -

ಹಸೆಮಣೆ ಏರಬೇಕಿದ್ದ ಕಾನೂನು ವಿದ್ಯಾರ್ಥಿನಿ ಒಬ್ಬಳು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರು ತಮಿಳುನಾಡು ನೀಲಗಿರೀಸ್ ಮೂಲದ ಕವೀಶ (21) ಎಂದು ಗುರುತಿಸಲಾಗಿದೆ.

ಈಕೆಯು ಮೈಸೂರಿನ ಜೆಎಸ್​ಎಸ್​ ಕಾನೂನು ಕಾಲೇಜಿನಲ್ಲಿ 7ನೇ ಸೆಮಿಸ್ಟರ್​ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕೆಲವು ದಿನಗಳಿಂದ ಊಟಿ ನಗರದ ನಿವಾಸಿ ಕಿರಣ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಇಬ್ಬರು ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದರು. ಈ ವಿಷ್ಯ ಎರಡು ಮನೆಯವರಿಗು ಗೊತ್ತಾಗಿತ್ತು. ಇದರಿಂದ ಕುಟುಂಬಸ್ಥರು ನಿಶ್ಚಿತಾರ್ಥ ಕೂಡ ಮಾಡಿ ಮುಗಿಸಿದ್ದರು.

ಆದರೆ ಮದುವೆಗೆ ಮೊದಲೇ ಕಿರಣ್​​ ಕುಟುಂಸ್ಥರಿಂದ ವರದಕ್ಷಿಣೆ ಕಿರುಕುಳ ಪ್ರಾರಂಭವಾಗಿತ್ತು. ಕಾರು ಹಾಗೂ ಭಾರೀ ಮೊತ್ತದಲ್ಲಿ ಚಿನ್ನ ನೀಡಬೇಕು ಎಂದು ಪೀಡಿಸಿದ್ದಾರೆ ಎನ್ನಲಾಗಿದೆ. ಕಾರು, ಚಿನ್ನ ಕೊಡದಿದ್ದರೇ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಎಲ್ಲ ಕಾರಣಗಳಿಂದ ಮನನೊಂದಿದ್ದ ವಿದ್ಯಾರ್ಥಿನಿಯು ತಾನು ತಂಗಿದ್ದ ಹಾಸ್ಟೆಲ್​ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಈ ಸಂಬಂಧ ವಿದ್ಯಾರ್ಥಿನಿಯ ಪೋಷಕರು, ಮದುವೆ ಆಗಲು ಬಯಸಿದ್ದ ಕಿರಣ್ ಹಾಗೂ ತಂದೆ ಸೇತುಮಾಧವ, ತಾಯಿ ಲತಾ ಹಾಗೂ ಮಾವನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

- Advertisement -

Related news

error: Content is protected !!