Tuesday, May 21, 2024
spot_imgspot_img
spot_imgspot_img

ವಿಟ್ಲ: (ನ.12) ಆಟೊ ಚಾಲಕರ ಮತ್ತು ಮಾಲಕರ ಸೌಹಾರ್ಧ ಸಂಘ (ರಿ.) RCMS ವಿಟ್ಲ ಇದರ 38ನೇ ವಾರ್ಷಿಕ ಪ್ರಯುಕ್ತ ಗುರುತಿನ ಚೀಟಿ ವಿತರಣೆ ಹಾಗೂ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ

- Advertisement -G L Acharya panikkar
- Advertisement -

ವಿಟ್ಲ: ಆಟೊ ಚಾಲಕರ ಮತ್ತು ಮಾಲಕರ ಸೌಹಾರ್ಧ ಸಂಘ (ರಿ.) RCMS ವಿಟ್ಲ ಇದರ ನೇತೃತ್ವದಲ್ಲಿ 38ನೇ ವಾರ್ಷಿಕ ಪ್ರಯುಕ್ತ ಗುರುತಿನ ಚೀಟಿ ವಿತರಣೆ ಹಾಗೂ ಲಯನ್ಸ್ ಕ್ಲಬ್ ವಿಟ್ಲ ಸಿಟಿ , ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ನ.12 ಆದಿತ್ಯವಾದಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30 ರ ತನಕ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆ ( RMSA) ” ಶತಮಾನೋತ್ಸವ ಸಭಾಭವನ”ದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ವಿಟ್ಲ RCMS (ರಿ) ಇದರ ಅಧ್ಯಕ್ಷ ಹರಿಣಾಕ್ಷ ಮಾರುಗುರಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ RMSA ಶಾಲಾಭಿವೃಧ್ದಿ ಸಮಿತಿಯ ಅಧ್ಯಕ್ಷ ಸುಬ್ರಾಯ ಪೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಟ್ಲ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ನಾಗರಾಜ್ H E, ವಿಟ್ಲ RCMS (ರಿ) ಗೌರವಾಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಾಜೆ ಹಾಗೂ ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ಜಯರಾಮ್ ಬಲ್ಲಾಳ್ ಇವರು ಗುರುತಿನ ಚೀಟಿ ಬಿಡುಗಡೆ ಮಾಡಲಿದ್ದಾರೆ ಹಾಗೂ ಮುಖ್ಯ ಅತಿಥಿಗಳಾಗಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!