Friday, June 27, 2025
spot_imgspot_img
spot_imgspot_img

ವಿಟ್ಲ: ಡಿವೈಡರ್ ಮೇಲಿನಿಂದ ಹಾರಿದ ಕಾರು ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ : ಮಹಿಳೆಗೆ ಗಾಯ

- Advertisement -
- Advertisement -

ವಿಟ್ಲ: ಡಿವೈಡರ್ ಮೇಲಿನಿಂದ ಜಂಪ್ ಮಾಡಿದ ಕಾರು ವಿರುದ್ದ ಬದಿಯಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರು ಚಾಲಕಿ ಗಾಯಗೊಂಡು ಬಿಸಿರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಿಕುಮೇರು ಎಂಬಲ್ಲಿ ನಡೆದಿದೆ.

ಬಿಸಿರೋಡು ನಿವಾಸಿ ರಮ್ಯ ಅವರು ಗಾಯಗೊಂಡ ಮಹಿಳೆ.

ಅವರು ಬಿಸಿರೋಡಿನಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಮೇಲೆ ಹತ್ತಿ ಕೆಳಗೆ ರಸ್ತೆಗೆ ಇಳಿದು ಎದುರಿನಿಂದ ಬರುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿಹೊಡೆದಿದೆ‌. ಸೂರಿಕುಮೇರು ಪೆಟ್ರೋಲಿಯಂ ಪಂಪ್ ಮುಂಭಾಗದಲ್ಲಿ ಘಟನೆ ನಡೆದಿದೆ. ರಮ್ಯಾ ಅವರು ಕಾರಿನಲ್ಲಿ ಒಬ್ಬರೇ ಇದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.ಪೂರ್ಲಿಪ್ಪಾಡಿಯಿಂದ ಮಾಣಿವರೆಗೆ ಕಾಂಕ್ರೀಟ್ ರಸ್ತೆಯ ಕಾಮಗಾರಿ ಮುಗಿದಿದ್ದು, ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

- Advertisement -

Related news

error: Content is protected !!