Thursday, March 28, 2024
spot_imgspot_img
spot_imgspot_img

ವಿಟ್ಲ: ಮಗಳು, ಅಳಿಯನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ; ಕಾಳೀಶ್ವರ ಸ್ವಾಮೀಜಿ ಸೇರಿ ಮತ್ತಿಬ್ಬರ ಬಂಧನ!

- Advertisement -G L Acharya panikkar
- Advertisement -

ವಿಟ್ಲ: ಕೊಳ್ನಾಡು ಗ್ರಾಮದ ಖಂಡಿಗ ಕಾಳೀಶ್ವರ ಸ್ವಾಮಿ ಯಾನೆ ಸುರೇಶ್ ಪ್ರಭು ಮತ್ತು ಐವರ ತಂಡದಿಂದ ಮಗಳು, ಅಳಿಯನ ಮೇಲೆ ಮಾರಣಾಂತಿಕ ಹಲ್ಲೆಗೈದ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸ್ವಾಮೀಜಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಮೀನು ವಿವಾದವೇ ಹಲ್ಲೆಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತಂದೆ ಸುರೇಶ ಪ್ರಭು ಅಲಿಯಾಸ್ ಕಾಳೀಶ್ವರ ಸ್ವಾಮಿ, ಶಿವಾನಂದ ಕಾಮತ್, ಆತನ ಹೆಂಡತಿ ಜಯಲಕ್ಷ್ಮೀ, ತಾಯಿ ಸುಮತಿ ಹಾಗೂ ಇತರರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪೈಕಿ ಸ್ವಾಮೀಜಿ ಸುರೇಶ್ ಪ್ರಭು (57), ಶಿವಾನಂದ ಕಾಮತ್ (33) ಹಾಗೂ ಚಂದ್ರ(30) ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ವಿವರ: ಸುರೇಶ್ ಪ್ರಭು ಎಂಬಾತನ ಮಗಳ ಗಂಡ ಚೇತನ್ ನಾಯ್ಕ್ ಎಂಬಾತನಿಗೆ ಕಬ್ಬಿಣದ ರಾಡ್‌ನಿಂದ ಶಿವಾನಂದ ಕಾಮತ್ ಹಿಂದಿಯಿಂದ ಹೊಡೆದಿದ್ದು, ಬಳಿಕ ತಂದೆ ಸುರೇಶ್ ಪ್ರಭು ಯಾನೇ ಕಾಳೀಶ್ವರ ಸ್ವಾಮೀಜಿ ರಾಡ್‌ನಿಂದ ತಲೆಯ ಬಲ ಬದಿಗೆ ಹಾಗೂ ತಲೆಯ ಮದ್ಯ ಭಾಗಕ್ಕೆ ಹೊಡೆದಿದ್ದಾರೆ. ಆಗ ತಲೆಗೆ ಗಾಯವಾಗಿ ನೆಲಕ್ಕೆ ಬಿದ್ದಿದ್ದಾರೆ. ಇಷ್ಟಾದರೂ ಶಿವಾನಂದ ಕಾಮತ್ ಕತ್ತು ಹಿಡಿದು ದೂಡಿ ಹಾಕಿದ್ದಾನೆ. ಅಂತೆಯೇ ಮನೆಗೆಲಸಕ್ಕೆ ಬಂದವರೂ ಹಲ್ಲೆ ನಡೆಸಿದ್ದಾರೆ. ಕಾಳೀಮಾತೆಯ ದೇವಸ್ಥಾನ ಎದುರಿನ ರಸ್ತೆಯಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ವಿಟ್ಲ: ಮಗಳು, ಅಳಿಯನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಕಾಳೀಶ್ವರ ಸ್ವಾಮಿ ಹಾಗೂ ಆತನ ಸಹಚರರಿಂದ ನಡೆದ ಕೃತ್ಯ

ರಕ್ತದ ಮಡುವಿನಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಚೇತನನ್ನು ಸ್ಥಳೀಯರು ವಿಟ್ಲ ಸಮುದಾಯ ಆಸ್ಪತ್ರೆಗೆ ಕೊಂಡೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಹೊಯ್ಸಳ ಪೊಲೀಸರು ಆಗಮಿಸಿದ್ದಾರೆ.

- Advertisement -

Related news

error: Content is protected !!