Friday, July 24, 2026
spot_imgspot_img
spot_imgspot_img

ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಸಾಮೂಹಿಕ ಯೋಗ ಶಿವನಮಸ್ಕಾರ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಎಸ್.ಪಿ.ವೈ.ಎಸ್.ಎಸ್. ಯೋಗ ಸಮಿತಿಯ ವತಿಯಿಂದ ದ.ಕ ಜಿಲ್ಲೆಯ ವಿವಿದೆಡೆ 12 ದೇವಾಲಯಗಳಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ರವಿವಾರ ಸಂಜೆ 6ರಿಂದ ಸೋಮವಾರ ಬೆಳಗಿನ ಜಾವದ ತನಕ ಜಾಗರಣ ಸಹಿತ ಸಾಮೂಹಿಕ ಯೋಗ ಶಿವನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಪ್ರಯುಕ್ತ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರವಿವಾರ ಸಂಜೆ 6.00 ಗಂಟೆಗೆ ಶ್ರೀಯುತ ಜಯರಾಮ ಬಲ್ಲಾಳ್ ವಿಟ್ಲಅರಮನೆ, ಶ್ರೀಮತಿ ಮಾಧುರಿ ಜಿಲ್ಲಾ ಸಹ ಸಂಚಾಲಕರು, ಪ್ರಕಾಶ ಅಣ್ಣಡ್ಕ ಸಂಚಾಲಕರು ವಿಟ್ಲ ನಗರ, ಪ್ರಕಾಶ ನಾಯಕ್ ಸಂಘಟನಾ ಪ್ರಮುಖರು ವಿಟ್ಲ ನಗರ, ಭಾಸ್ಕರ ವರದಿ ಪ್ರಮುಖರು, ಪ್ರಶಾಂತ , ವಿಸ್ತರಣಾ ಪ್ರಮುಖರು, ಮಂಜುನಾಥ ಶಿಕ್ಷಣ ಪ್ರಮುಖರು, ಶ್ರೀಮತಿ ವೃಂದಾ ಭಜನಾ ಪ್ರಮುಖರು, ಮತ್ತು ನಗರದ ಹಿರಿಯ ಯೋಗ ಬಂಧುಗಳ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಿವ ಪಂಚಾಕ್ಷರಿ 1008 ಬಾರಿ ಪಠಣೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮೃತ್ಯುಂಜಯ ಜಪ, ಭಜನೆ, ಜಾಗರಣೆ , ಶಿವಷ್ಟೋತರ ನಾಮಾವಳಿ ಪಠಣ,ಮಾಡಿದ್ದರು.

ಬೆಳಗಿನ ಜಾವ 3.30 ಕ್ಕೆ ಭಜನೆಯನ್ನು ಹರಿಶ್ಚಂದ್ರ, ಮೋಹನ , ಲಕ್ಷ್ಮಣ, ಮಾಡಿದರು. ಮಾನಸಿಕ ಸಿದ್ಧತೆಯಿಂದ ಗಣಪತಿ ನಮಸ್ಕಾರ ವಿವರಣೆಯನ್ನು ಯೋಗ ಬಂಧು ದಿನೇಶ ನೇರವೆರಿಸಿದ್ದರು. ಶಿವನಮಸ್ಕಾರ ಕಾರ್ಯಕ್ರಮನ್ನು ಯೋಗ ಬಂಧುಗಳಾದ ಸ್ವಾತಿ, ಉಮೇಶ, ಅಂಬಿಕಾ, ಸರೋಜನವರು 4 ಹಂತಗಳಲ್ಲಿ 11ಬಾರಿ ಯೋಗ ಶಿವ ನಮಸ್ಕಾರ ಬೆಳಗ್ಗೆ 5.30ರ ವರೆಗೆ ನೆಡೆಸಿಕೊಟ್ಟರು. ಶಿವನಮಸ್ಕಾರದ ಭೌದ್ಧಿಕವನ್ನು ಶ್ರೀಮತಿ ಮಮಿತಾ ನೆರವೆರಿಸಿದ್ದರು.

ಪ್ರಾತ್ಯಕ್ಷಿತೆಯಲ್ಲಿಉದಯ ಕೃಷ್ಣ, ಮುರಳಿಕೃಷ್ಣ, ಸುರೇಶ, ದಾಮೋದರ, ಬಾಲಕೃಷ್ಣ, ರಾಜೇಶ್ವರಿ, ವಿಜೇತ, ಲತಾ, ಕಮಲಾಕ್ಷಿ, ಗೀತ ಇವರು ಸಹಕರಿಸಿದರು. ಸೌಮ್ಯ ಅಮೃತಾಸನ, ಕಾರ್ಯಕ್ರಮದ ಸಂಚಾಲಕರಾದ ನಳಿನಿ ವಂದನಾರ್ಪಣೆ ಮಾಡಿದರು. ನಂತರ ಎಲ್ಲಾ ಯೋಗ ಬಂಧುಗಳು ಪಂಚಲಿಂಗೇಶ್ವರ ದೇವರ ರಥೋತ್ಸವದಲ್ಲಿ ಭಾಗವಹಿಸಿದ್ದರು. ವೀಣಾ ಪೈ, ಅನ್ನಪೂರ್ಣೇಶ್ವರಿ ಮಂತ್ರ ಪಠಣದೊಂದಿಗೆ ಪ್ರಸಾದ ಸ್ವೀಕರಿಸಲಾಯಿತು.

ವಿಟ್ಲ ನಗರದ 18 ಶಾಖೆಗಳಿಂದ 185 ಅಣ್ಣಂದಿರು, 128 ಅಕ್ಕಂದಿರು, ಸೇರಿ 313ಕ್ಕೂ ಮಿಕ್ಕ ಸಂಖ್ಯೆಯಲ್ಲಿ ಯೋಗ ಬಂಧುಗಳು, ಯೋಗೇತರ ಬಂಧುಗಳು 60 ಸಂಖ್ಯೆಯಲ್ಲಿ, ಒಟ್ಟು 373 ಭಾಗವಹಿಸಿದ್ದರು.

- Advertisement -

Related news

error: Content is protected !!