Monday, May 6, 2024
spot_imgspot_img
spot_imgspot_img

ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ನಲ್ಲಿ ವಿಶ್ವ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ , ಪೋಷಣ್‌ ಮಾಸಾಚರಣೆ, ಮಹಿಳೆಯರಿಗಾಗಿ ಕಾನೂನು ಮಾಹಿತಿ ಮತ್ತು ಸಖಿ ಕೇಂದ್ರದ ಬಗ್ಗೆ ಮಾಹಿತಿ ಕಾರ್ಯಗಾರ

- Advertisement -G L Acharya panikkar
- Advertisement -
vtv vitla

ವಿಟ್ಲ: ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ಗ್ರಾಮ ಪಂಚಾಯತ್‌ ವಿಟ್ಲ ಮುಡ್ನೂರು ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ , ಪೋಷಣ್‌ ಮಾಸಾಚರಣೆ, ಮಹಿಳೆಯರಿಗಾಗಿ ಕಾನೂನು ಮಾಹಿತಿ ಮತ್ತು ಸಖಿ ಕೇಂದ್ರದ ಬಗ್ಗೆ ಮಾಹಿತಿ ಕಾರ್ಯಗಾರ ಗ್ರಾಮ ಪಂಚಾಯತ್‌ ಅಧ್ಯಕ್ಷ ಪುನೀತ್‌ ಇವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನೆ ವಿಟ್ಲ ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ ಡಿ. ಇವರು ಪ್ರಾಸ್ತವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ಗ್ರಾಮ ಆರೋಗ್ಯ ಕಾರ್ಯಕ್ರಮ ಸಂಯೋಕ ಅಲ್ಲಭಕ್ಷು ಇವರು ಗ್ರಾಮ ಆರೋಗ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಸುರಕ್ಷಾಧಿಕಾರಿ ಇಂದಿರಾ ಇವರು ಚುಚ್ಚುಮದ್ದು, ಮಹಿಳೆಯರ ಆರೋಗ್ಯದ ಕುರಿತು ಮಾಹಿತಿ ನೀಡಿದರು.

ಸಖಿ ಒನ್‌ ಸ್ಟಾಪ್‌ ಸೆಂಟರ್‌ ಮಂಗಳೂರು ಆಡಳಿತಾಧಿಕಾರಿ ಪ್ರಿಯಾ ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರಿಗಾಗಿ ಕಾರ್ಯನಿರ್ವಹಿಸುತ್ತಿರುವ “ಸಖಿ-ಓನ್ ಸ್ಟಾಪ್” ಸೆಂಟರ್‌ ನ ಬಗ್ಗೆ ಮಾಹಿತಿಗಳನ್ನು ನೀಡಿದರು. ಪೋಷಣ್‌ ಅಭಿಯಾನ ಯೋಜನೆಯ ವಿಟ್ಲ ಯೋಜನೆಯ ವಲಯ ಸಂಯೋಜಕಿ ವಿನೀತಾ ಪೈ ಇವರು ಪೋಷಣ್‌ ಅಭಿಯಾನ ಯೋಜನೆಯ ಉದ್ದೇಶಗಳು, ಪೋಷಣ್‌ ಮಾಸಾಚರಣೆಯ ಮಹತ್ವದ ಬಗ್ಗೆ ವಿವರಿಸಿದರು .

ಕಾರ್ಯಕ್ರಮದಲ್ಲಿ ಪಂಚಾಯತ್‌ ಉಪಾಧ್ಯಕ್ಷೆ ರೋಹಿಣಿ, ಸದಸ್ಯರುಗಳಾದ ಉಮೇಶ್‌ ಗೌಡ, ಚಂದ್ರಾವತಿ, ಮಹಾಬಲೇಶ್ವರ್‌ ಭಟ್‌, ಮರಿಯಮ್ಮ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸುಜಯ ಕೆ. ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕತೆಯರು,ಆಶಾ ಕಾರ್ಯಕರ್ತೆಯರು, ಪಂಚಾಯತ್‌ ಸಿಬ್ಬಂದಿಗಳು, ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರು, ಸಾರ್ವಜನಿಕರು ಹಾಜರಿದ್ದರು. ವಲಯದ ಹಿರಿಯ ಮೇಲ್ವಿಚಾರಕಿ ರೂಪಕಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

- Advertisement -

Related news

error: Content is protected !!