Thursday, May 2, 2024
spot_imgspot_img
spot_imgspot_img

ವಿಟ್ಲಮುಡ್ನೂರು ಗ್ರಾಮಪಂಚಾಯತ್‌ನಲ್ಲಿ “ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ”ದ ಅಂಗವಾಗಿ ಗ್ರಂಥಪಾಲಕರ ದಿನಾಚರಣೆ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲಮುಡ್ನೂರು ಗ್ರಾಮಪಂಚಾಯತ್ ಆವರಣದಲ್ಲಿ “ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಆ.12ರಂದು ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್‌ ಮಾಡತ್ತಾರ್ ಇವರು ದೀಪೋಜ್ವಲನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಂಡಡ್ಕ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚೇತನ ನೀಡಿದರು. ಪಂಚಾಯತ್‌ನ ಗ್ರಂಥಪಾಲಕಿ ಭವ್ಯ ಸ್ವಾಗತಿಸಿದರು.

ವೇದಿಕೆಯಲ್ಲಿ ಗ್ರಾಮಪಂಚಾಯತ್ ಉಪಾಧ್ಯಕ್ಷೆ ರೋಹಿಣಿ, ಕುಂಡಡ್ಕ ಶಾಲಾ ಅಧ್ಯಾಪಕ ಜಯಪ್ರಕಾಶ್ ಉಪಸ್ಥಿತರಿದ್ದರು. ಪಂಚಾಯತಿ ಅಧ್ಯಕ್ಷ ಪುನೀತ್‌ ಮಾಡತ್ತಾರ್, ಗ್ರಂಥಪಾಲಕರ ದಿನಾಚರಣೆಯ ಮಹತ್ವದ ಕುರಿತು ತಮ್ಮ ಅಮೂಲ್ಯ ಹಿತವಚನಗಳನ್ನು ನೀಡಿದರು. ಕಂಬಳಬೆಟ್ಟು ಶಾಲಾ ಶಿಕ್ಷಕಿ ಅಕ್ಷತಾರವರು ಪುಸ್ತಕದ ಮಹತ್ವದ ಕುರಿತು ಮಾತನಾಡಿದರು. ಜಯಪ್ರಕಾಶರವರು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ನಾಟೆಕಲ್ಲು ಶಾಲಾ ಶಿಕ್ಷಕ ಶ್ರೀಪತಿ ನಾಯಕ್‌ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ನಾಟೆಕಲ್ಲು, ಕುಂಡಡ್ಕ ಹಾಗೂ ಕಂಬಳಬೆಟ್ಟು ಶಾಲಾ ವಿದ್ಯಾರ್ಥಿಗಳಿಗೆ ಭಾಷಣ,ಚಿತ್ರಕಲೆ ಹಾಗೂ ಸ್ವಾತಂತ್ರ್ಯ ಯೋಧರ ಹೆಸರು ಬರೆಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಗ್ರಾಮಪಂಚಾಯತ್‌ ಸಿಬ್ಬಂದಿ ವರ್ಗದವರು ಸ್ಪರ್ಧಾ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಿದರು.

- Advertisement -

Related news

error: Content is protected !!