Tuesday, June 9, 2026
spot_imgspot_img
spot_imgspot_img

ವಿಟ್ಲ ಪೊಲೀಸ್ ಠಾಣೆಯ ಮೂರು ಕಾನ್ಸ್ ಟೇಬಲ್ಸ್ ವರ್ಗಾವಣೆ

- Advertisement -
- Advertisement -

ವಿಟ್ಲ: ವಿಟ್ಲ ಪೊಲೀಸ್ ಠಾಣಾ ಕಾನ್ಸ್ ಟೇಬಲ್ ಗಳಾದ ಸತೀಶ್ ಕಡಮಗದ್ದೆ ಕಡಬ ಠಾಣೆಗೆ, ಲೊಕೇಶ್ ಪುತ್ತೂರು ಗ್ರಾಮಾಂತರ ಠಾಣೆಗೆ ಹಾಗು ಅನುಕುಮಾರ್ ಜಿ.ಎಸ್ ರವರು ಸುಳ್ಯ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

2012ರಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯ ಆರಂಭಿಸಿದ ಲೋಕೇಶ್‌ರವರು ಇದೀಗ ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಇವರು ಸುಳ್ಯ ತಾಲೂಕಿನ ತೊಡಿಕ್ಕಾನ ನಿವಾಸಿಯಾಗಿದ್ದಾರೆ.

ಸತೀಶ್ ರವರು 2009ರಲ್ಲಿ ಸುಬ್ರಹ್ಮಣ್ಯ ಠಾಣೆಯಲ್ಲಿ ಕರ್ತವ್ಯ ಆರಂಭಿಸಿದ್ದು, ಆ ಬಳಿಕ ಉರ್ವ, ಬರ್ಕೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ವಿಟ್ಲ ಠಾಣೆಗೆ ವರ್ಗಾವಣೆಗೊಂಡು ಬಂದಿದ್ದರು. ಇದೀಗ ಅಲ್ಲಿಂದ ಕಡಬ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಇವರು ಕಾಸರಗೋಡು ತಾಲೂಕಿನ ನೆಟ್ಟಣಿಗೆ ಗ್ರಾಮದ ಕಡಮಗದ್ದೆ ನಿವಾಸಿಯಾಗಿದ್ದಾರೆ.

2012ರಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯ ಆರಂಭಿಸಿದ ಅನುಕುಮಾರ್ ಜಿ.ಎಸ್. ರವರು ಇದೀಗ ಸುಳ್ಯ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಇವರು ಮೈಸೂರಿನ ಪಿರಿಯಾಪಟ್ಟಣ ನಿವಾಸಿಯಾಗಿದ್ದಾರೆ.

- Advertisement -

Related news

error: Content is protected !!