Saturday, May 4, 2024
spot_imgspot_img
spot_imgspot_img

ದ.ಕ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ: 615 ಕೋಟಿ ರೂ.ಗಳ ವ್ಯವಹಾರ : 2.63 ಕೋಟಿ ರೂ. ನಿವ್ವಳ ಲಾಭ

- Advertisement -G L Acharya panikkar
- Advertisement -

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿ. ಇದರ ವಿಶೇಷ ಸಾಧನೆ, ಲಾಭಂಶ ಹಾಗೂ ಮುಂದಿನ ವ್ಯವಹಾರದ ಪಕ್ಷಿನೋಟದ ಕುರಿತಾದ ಪತ್ರಿಕಾ ಗೋಷ್ಠಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ಸಭಾಭವನದಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಶೈಲಿಯ ಛಾಪು ಮೂಡಿಸುತ್ತಾ, ಸದಸ್ಯ ಭಾಂಧವರ ಮನಗೆದ್ದು 2022- 23 ನೇ ಸಾಲಿನ ಆರ್ಥಿಕ ವರ್ಷದಲ್ಲಿ ತನ್ನ ಗರಿಷ್ಠ ಕಾರ್ಯದಕ್ಷತೆಯನ್ನು ಮೆರೆದು ರೂ 2.63 ಕೋಟಿಗೂ ಮಿಕ್ಕಿ ಲಾಭ ಗಳಿಸಿ ವಿಶೇಷ ಸಾಧನೆಯನ್ನು ಮಾಡಿದೆ.

ಪ್ರಸ್ತುತ ಬಂಟ್ವಾಳ, ಪುತ್ತೂರು, ಸುಳ್ಯ, ಮಂಗಳೂರು, ಮತ್ತು ಬೆಳ್ತಂಗಡಿ ತಾಲೂಕಿನ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಬ್ಯಾಂಕ್ ವಿಟ್ಲದಲ್ಲಿ ಪ್ರಧಾನ ಕಚೇರಿ ಮತ್ತು ಕನ್ಯಾನ, ಕಲ್ಲಡ್ಕ, ಬಿ. ಸಿ ರೋಡ್ ಹಾಗೂ ಪುತ್ತೂರಿನಲ್ಲಿ ಶಾಖೆಗಳನ್ನು ಹೊಂದಿದ್ದು, ಒಟ್ಟು 7525 ಮಂದಿ ಸದಸ್ಯರಿದ್ದು ರೂ. 2.42 ಕೋಟಿ ಪಾಲು ಬಂಡವಾಳವನ್ನು ಹೊಂದಿರುತ್ತದೆ. ಸುಮಾರು 615 ಕೋಟಿ ವ್ಯವಹಾರವನ್ನು ದಾಖಲಿಸಿ ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ 58 ಕೋಟಿ ರೂಪಾಯಿ ಹೆಚ್ಚಿನ ವ್ಯವಹಾರವನ್ನು ಮಾಡಿರುತ್ತದೆ.

120.19 ಕೋಟಿ ರೂಪಾಯಿಗಳ ಠೇವಣಿ ಸಂಗ್ರಹಿಸಿದ್ದು ಕಳೆದ ಸಾಲಿಗಿಂತ 4.46 ಹೆಚ್ಚಾಳವಾಗಿದೆ. 68.90 ಕೋಟಿ ರೂ. ಗಳ ಹೊರ ಬಾಕಿ ಸಾಲಗಳಿದ್ದು ಸಾಲ ಮಸೂಲಾತಿ ಶೇಕಡಾ 91.54 ರಷ್ಟು ಆಗಿದೆ. ಪ್ರಸ್ತುತ ಬ್ಯಾಂಕ್ ನಲ್ಲಿ 7.56 ಕೋಟಿ ರೂ. ಮೀಸಲು ನಿಧಿಯಿದ್ದು, ರೂ. 10.21 ಕೋಟಿಗಳ ಇತರ ನಿಧಿಗಳನ್ನು ಹೊಂದಿದ್ದು, ರೂ. 2.97 ಕೋಟಿಗಳ ಚರ ಹಾಗೂ ಸ್ಥಿರಾಸ್ತಿ ಗಳನ್ನು ಹೊಂದಿರುತ್ತದೆ. ಬ್ಯಾಂಕಿನ ದುಡಿಯುವ ಬಂಡವಾಳ ರೂ. 143.04 ಕೋಟಿಗಳಾಗಿರುತ್ತದೆ. ಬ್ಯಾಂಕ್ ಹಲವಾರು ವರ್ಷಗಳಿಂದ ಅಡಿಟ್ ವರ್ಗಿಕರಣದಲ್ಲಿ ‘ಎ’ ತರಗತಿ ಪಡೆಯುತ್ತಾ ಬಂದಿದೆ.

ಪ್ರಧಾನ ಕಚೇರಿ: ಒಟ್ಟು ವ್ಯವಹಾರ ರೂ. 359 ಕೋಟಿಗಳಾಗಿದ್ದು, ಠೇವಣಾತಿಯು 69.80 ಕೋಟಿ ರೂ. ಗಳಾಗಿರುತ್ತದೆ. 25.03 ಕೋಟಿ ವ್ಯವಹಾರಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿ ಶೇಕಡಾ 91.78 ಆಗಿರುತ್ತದೆ. ಅಂದಾಜು ರೂ. 1.73 ಕೋಟಿ ಲಾಭ ಗಳಿಸಿರುತ್ತದೆ.

ಕನ್ಯಾನ ಶಾಖೆ: ಒಟ್ಟು ವ್ಯವಹಾರ ರೂ. 69.23 ಕೋಟಿಗಳಾಗಿದ್ದು, ಠೇವಣಾತಿಯು 18.19 ಕೋಟಿ ರೂ.ಗಳಾಗಿರುತ್ತದೆ. 7.53 ಕೋಟಿ ರೂ ಗಳ ಹೊರ ಬಾಕಿ ಸಾಲ ಇದ್ದು, ವಸೂಲಾತಿಯು ಶೇಕಡಾ 97.16 ಆಗಿರುತ್ತದೆ. ಅಂದಾಜು ರೂ. 18.32 ಲಕ್ಷ ಲಾಭ ಗಳಿಸಿರುತ್ತದೆ.


ಕಲ್ಲಡ್ಕ ಶಾಖೆ: ಒಟ್ಟು ವ್ಯವಹಾರ ರೂ. 73.13 ಕೋಟಿಗಳಾಗಿದ್ದು, ಠೇವಣಾತಿ 9.35 ಕೋಟಿ ರೂ.ಗಳಾಗಿರುತ್ತದೆ. 15.01 ಕೋಟಿ ರೂಗಳ ಹೊರಬಾಕಿ ಸಾಲ ಇದ್ದು ವಸೂಲಾತಿ ಶೇಕಡಾ 96.27 ಆಗಿರುತ್ತದೆ. ಅಂದಾಜು 39.02 ಲಕ್ಷ ಲಾಭಗಳಿಸಿರುತ್ತದೆ.

ಬಿ.ಸಿ ರೋಡ್ ಶಾಖೆ: ಒಟ್ಟು ವ್ಯವಹಾರ ರೂ. 39.52 ಕೋಟಿಗಳಾಗಿದ್ದು, ಠೇವಣಾತಿ 8.80 ಕೋಟಿ ರೂಪಾಯಿಗಳಾಗಿರುತ್ತದೆ. 7.81 ಕೋಟಿ ರೂಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 90.27 ಆಗಿರುತ್ತದೆ. ಅಂದಾಜು ರೂ 7.64 ಲಕ್ಷ ಲಾಭ ಗಳಿಸಿರುತ್ತದೆ.

ಪುತ್ತೂರು ಶಾಖೆ: ಒಟ್ಟು ವ್ಯವಹಾರ ರೂ.74.29 ಕೋಟಿಗಳಾಗಿದ್ದು, ಠೇವಣಾತಿ 14.02 ಕೋಟಿ ರೂಪಾಯಿಗಳಾಗಿರುತ್ತದೆ. 12.51 ಕೋಟಿ ರೂ ಗಳ ಹೊರ ಬಾಕಿ ಸಾಲ ಇದ್ದು, ವಸೂಲಾತಿಯು ಶೇಕಡಾ 82.80 ಆಗಿರುತ್ತದೆ. ಅಂದಾಜು ರೂ. 25.22 ಲಕ್ಷ ಲಾಭಗಳಿಸಿರುತ್ತದೆ.
2023-24 ನೇ ಸಾಲಿನಲ್ಲಿ ಬ್ಯಾಂಕ್ ರೂ. 660 ಕೋಟಿಗೂ ಮೀರಿದ ವ್ಯವಹಾರವನ್ನು ಹಾಗೂ ರೂ. 130 ಕೋಟಿ ಮೇಲ್ಪಟ್ಟು ಠೇವಣಿ ಸಂಗ್ರಹಣೆ, ರೂ. 83 ಕೋಟಿ ಸಾಲ ನೀಡಿಕೆ, ರೂ. 03 ಕೋಟಿಗೂ ಮೀರಿದ ಲಾಭವನ್ನು ಹಾಗೂ 96 ಶೇಕಡಾ ಸಾಲ ವಸೂಲಾತಿ ಮಾಡುವ ಗುರಿಯೊಂದಿಗೆ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಬ್ಯಾಂಕ್ ಅನುಭವಿ ಆಡಳಿತ ಮಂಡಳಿಯನ್ನು ಹೊಂದಿದ್ದು, ಬ್ಯಾಂಕಿನ ಅಧ್ಯಕ್ಷರಾಗಿ ಹೆಚ್ ಜಗನ್ನಾಥ ಸಾಲಿಯಾನ್, ಉಪಾಧ್ಯಕ್ಷರಾಗಿ ಮೋಹನ್ ಕೆ.ಎಸ್, ನಿರ್ದೇಶಕರಾಗಿ ಎಂ.ಹರೀಶ್ ನಾಯಕ್, ಮನೋರಂಜನ್ ಕೆ.ಆರ್, ವಿಶ್ವನಾಥ್ ಎಂ, ಕೃಷ್ಣ ಕೆ., ಉದಯಕುಮಾರ್ ಎ, ಬಾಲಕೃಷ್ಣ ಪಿ.ಎಸ್, ದಿವಾಕರ, ದಯಾನಂದ ಆಳ್ವ ಕೆ, ಸುಂದರ ಡಿ, ಗೋವರ್ಧನ ಕುಮಾರ್ ಐ, ಶ್ರೀಮತಿ ಶುಭಲಕ್ಷ್ಮಿ ಯಂ, ಜಯಂತಿ ಎಚ್.ಆರ್ ಸೇವೆ ಸಲ್ಲಿಸುತ್ತಿದ್ದಾರೆ.
ಬ್ಯಾಂಕಿನಲ್ಲಿ 32 ನುರಿತ ಸಿಬ್ಬಂದಿ ಗಳಿದ್ದು, ಕೃಷ್ಣ ಮುರಳಿ ಶ್ಯಾಮ್ ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ನ ಆಡಳಿತ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!