Wednesday, June 17, 2026
spot_imgspot_img
spot_imgspot_img

ವಿಟ್ಲ: ಶಾಲಾ ಪ್ರಾರಂಭೋತ್ಸವ; ಮತ್ತೆ ಬ್ಯಾಗ್‌ ಹಾಕಿಕೊಂಡು ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು

- Advertisement -
- Advertisement -

ವಿಟ್ಲ: 2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಇಂದಿನಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಲಿವೆ. ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಸಿಹಿ ಹಂಚಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸೂಚಿಸಿದ್ದು, ವಿಟ್ಲದಲ್ಲಿಯೂ ಚಿಣ್ಣರ ಚಿಲಿಪಿಲಿ ಕೇಳಿಸಿದೆ.

ವಿಟ್ಲದ ಹಲವೆಡೆ ಶಾಲೆ ಪ್ರಾರಂಭಗೊಂಡಿದೆ. ವಿಠ್ಠಲ ಪ್ರೌಢಶಾಲೆ, ವಿಠ್ಠಲ್‌ ಜೇಸೀಸ್‌ ಆಂಗ್ಲಮಾಧ್ಯಮ ಪ್ರೌಢಶಾಲೆ, ಸರಕಾರಿ ಪ್ರೌಢಶಾಲೆ (RMSA) ವಿಟ್ಲ, ಸೈಂಟ್‌ ರೀಟಾ ಆಂಗ್ಲಮಾಧ್ಯಮ ಶಾಲೆಗಳು ಪ್ರಾರಂಭಗೊಂಡಿತ್ತು.

ವಿಟ್ಲ ಸರಕಾರಿ ಪ್ರೌಢ ಶಾಲೆಯ 2023-24ನೇ ಸಾಲಿನ ಪ್ರಾರಂಭೋತ್ಸವು ನಡೆಯಿತು. ನೂತನವಾಗಿ ಸೇರಿದ ಮಕ್ಕಳನ್ನು ಆರತಿ ಬೆಳಗಿಸಿ ಸ್ವಾಗತಿಸಲಾಯಿತು. ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು. ಶಾಲಾ ಗೌರವಾಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.

- Advertisement -

Related news

error: Content is protected !!