Friday, May 3, 2024
spot_imgspot_img
spot_imgspot_img

ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ

- Advertisement -G L Acharya panikkar
- Advertisement -
vtv vitla

ವೈಭವದ ಹಸಿರು ಹೊರಕಾಣಿಕೆ, ಧಾರ್ಮಿಕ ಸಭಾ ಕಾರ್ಯಕ್ರಮ

ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ ಪ್ರಾರಂಭಗೊಂಡಿದ್ದು ಡಿಸೆಂಬರ್ 27ರಂದು ಸಂಜೆ ವಿಟ್ಲ ಜೈನ ಬಸದಿಯಿಂದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿ ಹಸಿರು ಹೊರಕಾಣಿಕೆ ಆಗಮನವಾಯಿತು.

ಮಾಣಿಲ ಶ್ರೀ ಮಹಾಲಕ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಾಗಿಬಂದ ಹಸಿರು ಹೊರಕಾಣಿಕೆಯಲ್ಲಿ ವಿಟ್ಲ ಪರಿಸರದ ಸುಮಾರು 24 ಭಾಗದಿಂದ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಬಳಿಕ ನಾರಾಯಣ ಸ್ವಾಮಿ ಬಟ್ಟುಸ್ವಾಮಿ ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯಿ ಇವರು ಶುಭ ಆಶೀರ್ವಚನ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೃಷ್ಣಯ್ಯ ವಿಟ್ಲ ಅರಮನೆ, ಡಾ.ಗೀತಪ್ರಕಾಶ್ ವಿಟ್ಲ, ರವೀಶ ಖಂಡಿಗ ಮೊಕ್ತೇಸರರು ಶ್ರೀ ಕ್ಷೇತ್ರ ಖಂಡಿಗ, ಜಯರಾಮ ರೈ ವಕೀಲರು, ದಿವಾಕರ ದಾಸ್ ನೇರ್ಲಾಜೆ ಎಸ್ ಎಲ್ ವಿ ಬುಕ್ಸ್ ಪ್ರೈವೇಟ್ ಲಿ.ಮೈಸೂರು, ಮುಳಿಯ ಗುತ್ತು ಜಗದೀಶ್ ಶೆಟ್ಟಿ ವ್ಯವಸ್ಥಾಪಕರು ಪ್ರಥಮ್ ಪೆಟ್ರೋಲಿಯಂ ಕುದ್ದುಪದವು, ಲಕ್ಷಣ ಶೆಟ್ಟಿ ಪಟ್ಲಗುತ್ತು ನಿವೃತ್ತ ಸೀನಿಯರ್ ಬ್ರಾಂಚ್ ಮೆನೇಜರ್ ವಿಜಯ ಬ್ಯಾಂಕ್ ಬೆಂಗಳೂರು, ಉದ್ಯಮಿ ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು, ಸಂತೋಷ್ ಕುಮಾರ್ ಶೆಟ್ಟಿ ಶೆಲ್ಟರ್ ಎಸೋಸಿಯೇಟ್ಸ್, ರಾಧಕೃಷ್ಣ ಶೆಟ್ಟಿ ಚೆಲ್ಲಡ್ಕ, ಅರುಣ್ ವಿಟ್ಲ, ಸದಾಶಿವ ಆಚಾರ್ಯ ಮಾಲಕರು ಶ್ರವಣ ಜ್ಯುವೆಲ್ಲರ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

- Advertisement -

Related news

error: Content is protected !!