Tuesday, May 30, 2023
spot_imgspot_img
spot_imgspot_img

ವಿಟ್ಲ: ಮಾಜಿ ಪಟ್ಟಣ ಪಂಚಾಯತ್‌ ಸದಸ್ಯನಿಂದ ಮಹಿಳೆಗೆ ಕಿರುಕುಳ; ಮಹಿಳೆಯ ಪತಿಯಿಂದ ಧರ್ಮದೇಟು ತಿಂದ ಶ್ರೀಕೃಷ್ಣ..!!

- Advertisement -G L Acharya
- Advertisement -

ವಿಟ್ಲ: ಮಹಿಳೆಯೋರ್ವರಿಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಪಟ್ಟಣ ಪಂಚಾಯತ್‌ ಸದಸ್ಯಯೋರ್ವರಿಗೆ ಸಾರ್ವಜನಿಕರ ಎದುರಲ್ಲೇ ಗೂಸಾ ನೀಡಿದ ಘಟನೆ ನಡೆದಿದೆ.

ಮಾಜಿ ಪಟ್ಟಣ ಪಂಚಾಯತ್‌ ಸದಸ್ಯ ಶ್ರೀಕೃಷ್ಣ ಪುತ್ತೂರು ಮೂಲದ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಎಂಬ ವಿಷಯ ತಿಳಿದ ಮಹಿಳೆಯ ಪತಿ ಸಾರ್ವಜನಿಕರ ಎದುರೇ ವಿಟ್ಲ ಬಸ್‌ ನಿಲ್ದಾಣದಲ್ಲಿ ಮಾಜಿ ಪಟ್ಟಣ ಪಂಚಾಯತ್‌ ಸದಸ್ಯನಿಗೆ ಧರ್ಮದೇಟು ನೀಡಿದ್ದಾರೆ ಎಂದು ಸಾರ್ವಜನಿಕ ಮಾಹಿತಿಯಂತೆ ತಿಳಿದುಬಂದಿದೆ.

ಈ ಮೊದಲು ಶ್ರೀಕೃಷ್ಣ ಪುತ್ತೂರು ಶಾಸಕ ಸಂಜೀವ ಮಠಂದೂರುರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಮತ್ತೊಂದು ಪ್ರಕರಣದಲ್ಲಿ ಪಟ್ಟಣ ಪಂಚಾಯತ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವರಿಗೆ ಜಾತಿ ನಿಂದನೆ ಮಾಡಿ ಬೆದರಿಕೆ ಒಡ್ಡಿದ ಆರೋಪದಲ್ಲಿ ಈತನ ಮೇಲೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಸಾರ್ವಜನಿಕರ ಮಾಹಿತಿಯಂತೆ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!