Saturday, May 4, 2024
spot_imgspot_img
spot_imgspot_img

ವಿಟ್ಲ: ಹಿಂಜಾವೇ ಮಂಗಳಪದವು ಘಟಕ ಇದರ ಆಶ್ರಯದಲ್ಲಿ 3ನೇ ವರ್ಷದ ಹಿಂದೂ ಭಾಂದವರ ವಾರ್ಷಿಕ ಕ್ರೀಡಾಕೂಟ

- Advertisement -G L Acharya panikkar
- Advertisement -

ವಿಟ್ಲ: ಹಿಂದೂ ಜಾಗರಣ ವೇದಿಕೆ ಮಂಗಳಪದವು ಘಟಕ ಇದರ ಆಶ್ರಯದಲ್ಲಿ 3ನೇ ವರ್ಷದ ಹಿಂದೂ ಭಾಂದವರ ವಾರ್ಷಿಕ ಕ್ರೀಡಾಕೂಟವು ಮಂಗಳಪದವು ಸೀಮ್ಲಾಜೆಗುತ್ತು ಮಲರಾಯ ಚಾವಡಿಯ ಎದುರಿನ ಗದ್ದೆಯಲ್ಲಿ ನಡೆಯಿತು.

ಬೆಳಿಗ್ಗೆ 9ಕ್ಕೆ ದೀಪ ಪ್ರಜ್ವಲನೆ ಮೂಲಕ ಕ್ರೀಡಾಕೂಟ ಆರಂಭ ಹಾಗೂ ಹಿಂದೂ ಜಾಗರಣ ಸೇವಾನಿಧಿ ಉದ್ಘಾಟನೆಗೊಂಡಿತ್ತು. ಅತಿಥಿಗಳಾಗಿ ಮೋಹನ್ ಶೆಟ್ಟಿ ಬೆಂಞತ್ತಿಮಾರ್‍ ಗುತ್ತು, ರೋಹಿತಾಶ್ವ ಭಂಗ ಮುಡಿಪಾರು, ಹೊನ್ನಪ್ಪ ಗೌಡ ಕೋಚೊಡಿ, ಶಿವಚರಣ್ ಶೆಟ್ಟಿ ಪಲೇರಿ, ವಿಮಲ ಶೆಟ್ಟಿ ಸೀಮ್ಲಾಜೆ, ವನಮಾಲ ಶೆಟ್ಟಿ ಸೀಮ್ಲಾಜೆ ಭಾಗವಹಿಸಲಿದ್ದರು.

ಸಂಜೆ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಶೆಟ್ಟಿ ಮಾಣಿ ವಹಿಸಲಿದ್ದರು. ಅತಿಥಿಗಳಾಗಿ ಹಿಂ.ಜಾ.ವೇ ಜಿಲ್ಲಾಕಾರಕಾರಿಣಿ ಸದಸ್ಯರಾದ ಪ್ರಶಾಂತ್ ಶೆಟ್ಟಿ, ಗಣೇಶ್‌ ಕೆದಿಲ, ಹಿಂ.ಜಾ.ವೇ ವಿಟ್ಲ ತಾ.ಸಂಯೋಜಕ ಹರ್ಷ ಶೆಟ್ಟಿ, ಗೋಲ್ಡನ್ ವಿಂಗ್ಸ್ ಲಿಫ್ಟ್‌&ಎಲಿವೇಟರ್‍ಸ್ ಪ್ರೈವೆಟ್ ಲಿಮಿಟೆಡ್‌ನ ಬ್ರಿಜೇಶ್ ನಾಯರ್, ಸ್ನೇಹರಾಮ್‌ದಾಸ್ ಶೆಟ್ಟಿ, ಪ್ರಶಾಂತ್ ರೈ ಟೋಲ್‌ಗೇಟ್, ಮೋಕ್ಷಿತ್‌ ರೈ ಬನಾರಿ, ದೀಪಕ್ ಶೆಟ್ಟಿ ಸೀಮ್ಲಾಜೆ, ನ್ಯೂ ಕಾಮಧೇನು ಆರ್ಥ್‌ ಮೂವರ್ಸ್‌‌ನ ಚಿತ್ತರಂಜನ್ ನೆಕ್ಕಿಲಾರ್, ಅಜಯ್ ಪೊಳಲಿ ಆರ್ಥ್ ಮೂವರ್‍ಸ್‌, ಗಣೇಶ್ ಗೌಡ ಕೈಂತಿಲ, ಮಂಗಳೂರು ಶ್ರೀದೇವಿ ಬಿಲ್ಡರ್‍ಸ್‌ನ ಸಂದೀಪ್ ಶೆಟ್ಟಿ ಅರೆಬೆಟ್ಟು, ಉದಯ ಬಂಗೇರ, ಯೋಗೀಶ್ ಪಿ.ನಾಯ್ಕ, ನವೀನ್ ಶೆಟ್ಟಿ ಪಾತ್ರಜಾಲ್, ನಿಟಿಲ ಕನ್‌ಸ್ಟ್ರಕ್ಷನ್‌ನ ಸಂತೋಷ್ ಶೆಟ್ಟಿ, ಜೀವನ್‌ ಶೆಟ್ಟಿ ಸೀಮ್ಲಾಜೆ ಅತಿಥಿಗಳಾಗಿ ಭಾಗವಹಿಸದ್ದರು.

ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತ ಭಾಷಣವನ್ನು ಧನಂಜಯ ಪಾದೆ ನೆರವೇರಿಸಿ, ದೇವಿಪ್ರಸಾದ್‌ ಶೆಟ್ಟಿ ಧನ್ಯವಾದವಿತ್ತರು. ಮಕ್ಕಳ ಆಟೋಟ ಸ್ಫರ್ಧೆಯ ತೀರ್ಪುಗಾರರಾಗಿ ಪ್ರತೀಭಾ ರೈ ಆಗಮಿಸಿದರು. ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ರೀಡೆಗಳು ನಡೆಯಿತು.

- Advertisement -

Related news

error: Content is protected !!