Monday, May 6, 2024
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸೀ ಶಾಲೆ ಯೂತ್ ಪಾರ್ಲಿಮೆಂಟ್ ; ವಿದ್ಯಾರ್ಥಿಗಳಿಗೆ ಸಂಸದೀಯ ವ್ಯವಸ್ಥೆಯ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ ವಿಶ್ವೇಶ್ವರ ಭಟ್

- Advertisement -G L Acharya panikkar
- Advertisement -

ವಿಟ್ಲ: ವಿಶ್ವಕ್ಕೆ ಮಾದರಿಯಾಗಿರುವ ಭಾರತದ ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆಯ ಅಡಿಯಲ್ಲಿ ನಿಂತಿದೆ. ಇದನ್ನು ಮಾದರಿಯಾಗಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ನಿವೃತ್ತ ನ್ಯಾಯಾಧೀಶ ಡಿ.‌ವಿಶ್ವೇಶ್ವರ ಭಟ್ ಹೇಳಿದರು. ಅವರು ವಿಟ್ಲ ವಿಠಲ್ ಜೇಸೀಸ್ ಯೂತ್ ಪಾರ್ಲಿಮೆಂಟ್ 2023 ಅನ್ನು ಉದ್ಘಾಟಿಸಿ ಮಾತನಾಡಿದರು. ಸಂಸತ್ತಿನ ಇತ್ತೀಚೆಗಿನ ಚಳಿಗಾಲದ ಅಧಿವೇಶನದ ವಿದ್ಯಮಾನದ ಬಗ್ಗೆ ನಾನೇನೂ ಹೇಳಲಾರೆ‌. ಆಡಳಿತ ಪಕ್ಷ ಪ್ರತಿಪಕ್ಷದ ನಡವಳಿಕೆಯ ಬಗ್ಗೆ ತೀರ್ಮಾನ ಕೊಡುವಷ್ಟು ಶಕ್ತನಲ್ಲ. ಆದರೆ ಜ‌ನರಿಂದ ಆಯ್ಕೆಯಾದ ಸಂಸದರು ಸಂಸತ್ತಿನಲ್ಲಿ ಜನರ ಧ್ವನಿಯಾಗಿ ಮಾದರಿ ಆಗಬೇಕು. ಇಂದಿನ ಜೇಸೀಸ್ ಯೂತ್ ಪಾರ್ಲಿಮೆಂಟ್ ಈ ನಿಟ್ಟಿನಲ್ಲಿ ಸಹಕಾರಿ ಆಗಲಿ ಎಂದವರು ಹೇಳಿದರು.

ಅಳಿಕೆ ಸತ್ಯಸಾಯಿ ಪದವಿಪೂರ್ವ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕ ಸಿ.ಎಚ್. ಪದ್ಮನಾಭ, ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಅನ್ನಪೂರ್ಣಾ, ವಿಠಲ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಆದರ್ಶ ಚೊಕ್ಕಾಡಿ, ವಿಠಲ ಜೇಸೀಸ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಮೋಹನ್ ಎ, ಸದಸ್ಯರಾದ ಶ್ರೀಪ್ರಕಾಶ ಕುಕ್ಕಿಲ, ಹಸನ್ ವಿಟ್ಲ, ಜೇಸೀಸ್ ಅಧ್ಯಕ್ಷ, ಸಂತೋಷ ಶೆಟ್ಟಿ , ಉಪನ್ಯಾಸಕ ಮಾಧವ, ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು ಮೊದಲಾದವರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಸ್ವಾಗತಿಸಿದರು. ಪ್ರಾಂಶುಪಾಲ ಜಯರಾಮ ರೈ ವಂದಿಸಿದರು. ಶಿಕ್ಷಕಿ ರೇಖಾ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿ ಸಂಸತ್ ಅಧಿವೇಶನ ಜರಗಿತು‌. ಅಧಿವೇಶನದಲ್ಲಿ, ಪ್ರಜಾಪ್ರಭುತ್ವ ಸರ್ಕಾರದಲ್ಲಿ ವಿವಿಧ ಅಕ್ರಮ ಚಟುವಟಿಕೆಗಳನ್ನು ನಡೆಸುವ ಮೂಲಕ ಪರಿಸರವನ್ನು ಹಾಳು ಮಾಡುವ ಕಾರ್ಯ ಮಾಡುತ್ತಿದ್ದಾರೆ.. ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡುವುದರಿಂದ ಅಗತ್ಯ ಜ್ಞಾನವನ್ನು ಪಡೆದುಕೊಳ್ಳಲು ಕಷ್ಟವಾಗುತ್ತಿದೆ.. ಪ್ರಧಾನ ಮಂತ್ರಿಗಳ ಸ್ವಚ್ಛತಾ ಭಾರತ ಅಭಿಯಾನಗಳಿಗೆ ಸಮರ್ಪಕವಾದ ಸ್ಪಂಧನೆ ಲಭಿಸುತ್ತಿಲ್ಲ.. ಮಕ್ಕಳ ದೌರ್ಜನ್ಯ ಕಾಯ್ದೆಯ ಅನುಷ್ಠಾನದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.. ಮಾನ್ಯ ಸಭಾಧ್ಯಕ್ಷರೇ, ನಮ್ಮ ಆರೋಪಕ್ಕೆ ಸಮರ್ಪಕ ಉತ್ತರ ಲಭಿಸುತ್ತಿಲ್ಲ.. ಎಂಬ ಪ್ರಸ್ತುತ ಸಮಾಜದ ಸಮಸ್ಯೆಗಳ ಧ್ವನಿ ಜೇಸೀ ಯೂಥ್ ಪಾರ್ಲಿಮೆಂಟ್ ನಲ್ಲಿ ಯುವ ರಾಜಕಾರಣಿಗಳಿಂದ ಮೊಳಗಿತು. ಇದು ನಮ್ಮ ಘನ ಸರಕಾರದ ಸಭೆಗೂ ತಲುಪಿದರೆ ಸಾರ್ಥಕವಾಗಬಹುದೆಂಬ ಇಂಗಿತವಿತ್ತು.

ವಿದ್ಯಾರ್ಥಿಗಳಲ್ಲಿ ದೇಶದ ರಾಜಕೀಯ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಯೂತ್ ಪಾರ್ಲಿಮೆಂಟ್ ಕಾರ್ಯಕ್ರಮವನ್ನು ಶಾಲೆಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಕೋವಿಡ್ ಸಮಯದ ಬಳಿಕ ಈಗ ಮತ್ತೆ ಇದನ್ನು ಆರಂಭಿಸಿ ಸಂವಿಧಾನ ಹಾಗೂ ದೇಶದ ಕಾನೂನಿನ ಅರಿವನ್ನು ನೀಡುವ ಕಾರ್ಯವನ್ನು ಈ ಮೂಲಕ ಆಯೋಜಿಸಲಾಗಿತ್ತು. ಸುಮಾರು 470 ವಿದ್ಯಾರ್ಥಿಗಳನ್ನೊಳಗೊಂಡ ಪ್ರೇಕ್ಷಕರಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿ ಪ್ರಶಂಸಿದರು. ಉತ್ತಮ ಭಾಗವಹಿಸುವಿಕೆಗಾಗಿ, ಪ್ರದಾನ ಮಂತ್ರಿಯಾಗಿ ಭಾಗವಹಿಸಿದ ನವ್ಯ ಭಟ್ ಪುರಸ್ಕೃತರಾದರು. ಎಲ್ಲಾ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಸಂಯೋಜನೆಗೆ ಶಿಕ್ಷಕರಾದ ಗುರುವಪ್ಪ ಮತ್ತು ರೇಖಾ ಪಿ‌. ಸಹಕರಿಸಿದರು, ಈ ಸಂದರ್ಭದಲ್ಲಿ ಕ್ರೀಡಾಪಟು ವಿದ್ಯಾರ್ಥಿ ಇಶಾನ್ ಕಾರ್ಯಪ್ಪ ರವರನ್ನು ಗೌರವಿಸಲಾಯಿತು.

- Advertisement -

Related news

error: Content is protected !!