Sunday, October 6, 2024
spot_imgspot_img
spot_imgspot_img

ಮಾನ ಮರ್ಯಾದೆ ಇದ್ರೆ ದೇವಸ್ಥಾನಕ್ಕೆ ಹೋಗುವುದನ್ನ ನಿಲ್ಲಿಸಬೇಕು – ಹಿಂದೂ ಧರ್ಮ ನಮ್ಮದಲ್ಲ, ಅದು ನಮಗೆ ಬೇಕಾಗಿಲ್ಲ : ಪ್ರೊ.ಕೆ.ಎಸ್ ಭಾಗವಾನ್ ವಿವಾದಾತ್ಮಕ ಹೇಳಿಕೆ!

- Advertisement -
- Advertisement -

ಮೈಸೂರಿನಲ್ಲಿ ನಡೆದ ಮಹಿಷ ದಸರಾ ಆಚರಣೆಯಲ್ಲಿ ಮಾತನಾಡಿದ ಸಾಹಿತಿ ಪ್ರೊ.ಕೆ.ಎಸ್.ಭಗವಾನ್​ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಬುದ್ಧರನ್ನು ಹೊಗಳುವ ಭರದಲ್ಲಿ ಹಿಂದೂ ಧರ್ಮದ ಬಗ್ಗೆ ಹೀನವಾಗಿ ಮಾತನಾಡಿದ್ದಾರೆ. ದೇವಸ್ಥಾನ ಕಟ್ಟಿದ ಶೂದ್ರರನ್ನೇ ಬಿಟ್ಟುಕೊಳ್ಳಲ್ಲ. ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.

ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನ್ನು ಬ್ರಾಹ್ಮಣರು ಎನ್ನಲ್ಲಾ, ಅವರನ್ನು ಶೂದ್ರರು ಅಂತಾರೆ. ದೇವಸ್ಥಾನ ಕಟ್ಟುವುದು ಶೂದ್ರರು. ದೇವಸ್ಥಾನದ ಒಳಗೆ ಇರುವವರ ಬ್ರಾಹ್ಮಣರು. ದೇವಸ್ಥಾನ ಕಟ್ಟಿದ ಶೂದ್ರರನ್ನೇ ಬಿಟ್ಟುಕೊಳ್ಳಲ್ಲ. ನಾವು ಶೂದ್ರರಲ್ಲಾ ಎಂದು ಹೇಳಬೇಕು ಎಂದಿದ್ದಾರೆ.

ಹಿಂದೂ ಧರ್ಮ ನಮ್ಮದಲ್ಲ. ನಮಗೆ ಹಿಂದೂ ಧರ್ಮ ಬೇಕಿಲ್ಲ. ಎಲ್ಲರೂ ಬುದ್ಧ ಗುರುಗಳನ್ನು ನಂಬಿ. ನಾನು ಹೇಳಿದ್ದು ನಂಬಿ ಅಂತಾ ಬುದ್ಧ ಹೇಳಲ್ಲ. ನಾನು‌ ಹೇಳಿದ್ದು ಕೇಳಬೇಕು ಇಲ್ಲದಿದ್ದರೆ ಸ್ವರ್ಗ ಸಿಗಲ್ಲ ಅಂತ ಏಸು ಹೇಳುತ್ತಾರೆ. ನನ್ನ ಮಾತು ಕೇಳದಿದ್ದರೆ ಮೋಕ್ಷ ಸಿಗಲ್ಲ ಅಂತ ಪ್ರವಾದಿ ಹೇಳುತ್ತಾನೆ. ನಾನು ಹೇಳಿದ್ದು‌ ಕೇಳದಿದ್ದರೆ ನರಕ್ಕೆ ಹೋಗ್ತೀರಾ ಅಂತಾ ಕೃಷ್ಣ ಹೇಳುತ್ತಾನೆ. ಗುಲಾಮ, ಸೂಳೆಮಗ ಎಂದು ಹೇಳುವ ಹಿಂದೂ ಧರ್ಮದಲ್ಲಿ ಇರಬಾರದು. ನಾವು ಬುದ್ಧ ಧರ್ಮಕ್ಕೆ ಹೋಗಬೇಕು. ಹಿಂದೂ ಧರ್ಮಕ್ಕೆ ಎಡಗಾಲು ಎಕ್ಕಡ ತಗೊಂಡು ಹೊಡೆಯಬೇಕು. ಶೂದ್ರರು ಎಂಬ ಗುಲಾಮರನ್ನು ಎಚ್ಚರಿಸಬೇಕು. ಯಾರು ಹೀನನಾಗಿದ್ದಾನೆ ಅವನು ಹಿಂದೂ. ಹಿಂದೂ ಎಂದರೆ ಹೀನಾ ಎಂದು ಅರ್ಥ. ಯಾರು ಹಿಂದೂ ಆಗಬಾರದು.

ನಾನು ದೇವಸ್ಥಾನಕ್ಕೆ ಹೋಗಿ 50 ವರ್ಷ ಆಯ್ತು. ದೇವಸ್ಥಾನಕ್ಕೆ ಹೋದರೆ ಏನು ಆಗಲ್ಲ ತಟ್ಟೆಗೆ ದುಡ್ಡು ಹಾಕ್ತಿರಾ, ಅರ್ಧ ಕೈ ಇಟ್ಟುಕೊಂಡು ಅರ್ಧ ಕೊಡ್ತಾರೆ ದೇವಸ್ಥಾನಕ್ಕೆ ಹೋಗುವುದರಿಂದ ಕಳೆದುಕೊಳ್ಳುತ್ತೇವೆ. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು ಎಂದು ಮಹಿಷ ದಸರಾದಲ್ಲಿ ಸಾಹಿತಿ ಪ್ರೊಫೆಸರ್ ಕೆಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -

Related news

error: Content is protected !!