Friday, July 4, 2025
spot_imgspot_img
spot_imgspot_img

ಬಂಟ್ವಾಳ: (ನ.26) ತಾಲೂಕು ಕೇಂದ್ರದಲ್ಲಿ ಮತ ಏಣಿಕೆ

- Advertisement -
- Advertisement -

ಬಂಟ್ವಾಳ: ಪುರಸಭೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಹಾಗೂ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 11 ಸ್ಥಾನಗಳಿಗೆ ಶನಿವಾರ ಉಪಚುನಾವಣೆ ನಡೆಯಿತು.

ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆದಿದ್ದು, ಶಾಂತಿಯುತ ಹಾಗೂ ಯಾವುದೇ ಗೊಂದಲಗಳಿಲ್ಲದೆ ಚುನಾವಣೆ ನಡೆದಿದೆ. ಬಂಟ್ವಾಳ ಪುರಸಭೆಯ 2ನೇ ಬಿ ಕಸ್ಟಾ ವಾರ್ಡಿನ ಉಪ ಚುನಾವಣೆಯ ಮತದಾನ ಮಂಡಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, 72 ಶೇಕಡಾ ಮತದಾನ ದಾಖಲಾಗಿದೆ.

ಉಳಿದಂತೆ ಪಂಚಾಯತ್ ವ್ಯಾಪ್ತಿಯ ಸಜಿಪಮುನ್ನೂರು ಗ್ರಾಮ ಪಂಚಾಯತಿನ 2 ಸ್ಥಾನಗಳಿಗೆ ಮೂರು ಬೂತ್ ಗಳಲ್ಲಿ ಮತದಾನ ನಡೆದಿದ್ದು, ಕ್ರಮವಾಗಿ 66 ಶೇಕಡಾ, 61 ಶೇಕಡಾ ಹಾಗೂ 55 ಶೇಕಡಾ ಮತದಾನ ನಡೆದಿದೆ. ಮಂಚಿ ಗ್ರಾಮದ 1 ಸ್ಥಾನದಲ್ಲಿ ನಡೆದ ಉಪ ಚುನಾವಣೆಯಲ್ಲಿ 71 ಶೇಕಡಾ, ಬಿಳಿಯೂರಿನಲ್ಲಿ 69 ಶೇಕಡಾ, ಕುಡಂಬೆಟ್ಟು 65 ಶೇಕಡಾ, ಸಜಿಪಮೂಡದಲ್ಲಿ 76 ಶೇಕಡಾ, ಪಂಜಿಕಲ್ಲು 75 ಶೇಕಡಾ, ಪಂಜಿಕಲ್ಲು 74 ಶೇಕಡಾ, ಅಮ್ಮಾಡಿಯಲ್ಲಿ 67 ಶೇಕಡಾ, ಬಡಗಬೆಳ್ಳೂರು 69 ಶೇಕಡಾ ಮತದಾನವಾಗಿದೆ ಎಂದು ತಾಲೂಕು ಕಛೇರಿ ಮಾಹಿತಿ ತಿಳಿಸಿದೆ. ನವೆಂಬರ್ 26 ರಂದು ಮಂಗಳವಾರ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅದೇ ದಿನ ಫಲಿತಾಂಶ ಲಭ್ಯವಾಗಲಿದೆ.

- Advertisement -

Related news

error: Content is protected !!