Friday, March 29, 2024
spot_imgspot_img
spot_imgspot_img

“ಸಮೃದ್ಧಿ ಟೆಕ್ಸ್‌ಟೈಲ್ಸ್” ಮೆನ್ಸ್ ಡ್ರೆಸ್ ಮತ್ತು ಪುಟ್‌ವೇರ್ ಬ್ರಾಂಡೆಡ್ ಮಳಿಗೆ ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ರಸ್ತೆಯ ಶ್ರೀ ಲಕ್ಷ್ಮೀ ನಾರಾಯಣ ಕಾಂಪ್ಲೆಕ್ಸ್‌ನಲ್ಲಿ ” ಸಮೃದ್ಧಿ ಟೆಕ್ಸ್‌ಟೈಲ್ಸ್” ಮೆನ್ಸ್ ಡ್ರೆಸ್ ಮತ್ತು ಪುಟ್‌ವೇರ್ ಬ್ರಾಂಡೆಡ್ ಡ್ರೆಸ್ ಮಳಿಗೆ ಶುಭಾರಂಭಗೊಂಡಿತು.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಸಮೃದ್ಧಿ ಯೋಜನೆಯಡಿ ರೋಮನ್ ಐರ್ಲಾಂಡ್ ಕಂಪೆನಿಯ ರೀಟೇಲ್ ಮಳಿಗೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿ ಶಾಸಕ ಸಂಜೀವ ಮಠಂದೂರು ಅವರು ಆಧುನಿಕ ಯುಗದಲ್ಲಿ ವಿಟ್ಲದ ಜನತೆಗೆ ಈ ಉದ್ಯಮ ಇನ್ನಷ್ಟು ಮೆರಗನ್ನು ಹೆಚ್ಚಿಸಲಿದೆ. ಗ್ರಾಮೀಣ ಭಾಗದ ಯುವಕ ಯುವತಿಯರು ತಮ್ಮ ಗ್ರಾಮದಲ್ಲಿ ಸ್ವಉದ್ಯೋಗ ಮಾಡಬೇಕು. ಇದರಿಂದ ಊರಿನ ಎಲ್ಲರಿಗೂ ಉದ್ಯೋಗ ಸಿಗುತ್ತದೆ ಎಂಬುದು ದೇಶದ ಪ್ರಧಾನಿಯವರ ಉದ್ದೇಶವಾಗಿದೆ. ಇಲ್ಲಿ ನಿರ್ಮಾಣಗೊಂಡ ಈ ಮಳಿಗೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದರು.

ಶ್ರೀಧರ್ ಭಟ್ ಕಬಕ ಧಾರ್ಮಿಕ ಕಾರ್ಯ ನೆರವೇರಿಸಿದರು. ರೋಮನ್ ಐರ್ಲಾಂಡ್ ಕಂಪೆನಿಯ ಬ್ರಾಡೆಂಡ್ ಎಲ್ಲಾ ತರಹದ ಪುರುಷರ ಉಡುಪುಗಳು ಇಲ್ಲಿ ಲಭ್ಯವಿದೆ. ಇದು ವಿಟ್ಲದಲ್ಲಿ ಮೊತ್ತಮೊದಲ, ಏಕೈಕ ಬ್ರಾಡೆಂಡ್ ಡ್ರೆಸ್ ಶೋ ರೂಂ ಆಗಿದೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಅನಿತಾ ಮುಡ್ಲೂರು, ಶ್ರೀ ಲಕ್ಷ್ಮೀ ನಾರಾಯಣ ಕಾಂಪ್ಲೆಕ್ಸ್ ಮಾಲಕ ಸುದರ್ಶನ್ ಪಡಿಯಾರ್, ಹಾಗೂ ” ಸಮೃದ್ಧಿ ಟೆಕ್ಸ್‌ಟೈಲ್ಸ್”ನ ಮಾಲಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!