Thursday, April 25, 2024
spot_imgspot_img
spot_imgspot_img

ವಿ.ಟಿವಿ. ಜನಾಭಿಪ್ರಾಯ: ಅನ್ನದ ತಟ್ಟೆಗೆ ಸರ್ಕಾರ ಕನ್ನ ಹಾಕಿದೆ – ಪವನ್ ಕುಮಾರ್ ಶಿರ್ವ

- Advertisement -G L Acharya panikkar
- Advertisement -

ಈ ಕೋವಿಡ್ 19 ನಿಂದ ಮೊದಲಿಗೆ ಜನರು ಬಡವರು ಮತ್ತು ಮಧ್ಯಮ ವರ್ಗದ ಜನರ ಜೀವನದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಲಾಕ್‌ಡೌನ್ ಜನರು ಕೆಲಸಕ್ಕೆ ಹೊಗುವುದಿಲ್ಲ. ಕೆಲವು ಕುಟುಂಬದಲ್ಲಿ 10-20 ಜನ ಜೀವನ ಮಾಡುತ್ತಿದ್ದು, ಕೆಲವು ಕುಟುಂಬದಲ್ಲಿ ಮನೆಯ ಆಧಾರ ಸ್ತಂಭವೇ ಇಲ್ಲದೇ ಇದ್ದು ಸಾಲ ಮೂಲಗಳ ಮೂಲಕ ಜೀವನವನ್ನು ಮಾಡುತ್ತಿದ್ದು ಈ ಪರಿಸ್ಥಿತಿಯಲ್ಲಿ ಸರ್ಕಾರ ಬಿ.ಪಿ.ಎಲ್ ಕಾರ್ಡ್ ರದ್ದು ಮಾಡುವುದು ಬಡವರ ಮತ್ತು ಮಧ್ಯಮ ವರ್ಗದವರ ಅನ್ನಕ್ಕೆ ಕನ್ನಹಾಕಿದಂತಿದೆ.

ಕೆಲವೊಮ್ಮೆ ಜನರು ಬ್ಯಾಂಕಿನಲ್ಲಿ ಸಾಲಗಳು ಮಾಡಿ ಜಾಗ ತೆಗೆದುಕೊಂಡು ಮನೆ ಕಟ್ಟಿ ಮನೆಗೆ ಬೇಕಾದ ಸಾಮಾಗ್ರಿ ಅಥವಾ ವಾಹನವನ್ನು ತೆಗೆದುಕೊಳ್ಳುವಾಗ ಜನರು ಒಟ್ಟು ಮೊತ್ತ ಕೊಟ್ಟು ತೆಗೆದುಕೊಳ್ಳಲು ಅವರಲ್ಲಿ ಮೊತ್ತ ಇರುವುದಿಲ್ಲ. ಅದಕ್ಕಾಗಿ ಸಾಲ ಮೂಲವನ್ನು ಮಾಡಿ ಕಂತಿನ ಮೂಲಕ ಪಾವತಿಸುತ್ತಾರೆ. ಕೆಲವು ಬ್ಯಾಂಕಿನಲ್ಲಿ ಸಾಲ ಬೇಕಾದರೆ ಮೊದಲಿಗೆ ಕೇಳುವುದು ತೆರಿಗೆ. ತೆರಿಗೆ ನೀಡದಿದ್ದರೆ ಸಾಲವನ್ನು ನೀಡುವುದಿಲ್ಲ. ಅದೆಲ್ಲ ಕಾರಣದಿಂದ ಬಿ.ಪಿ.ಎಲ್ ಕಾರ್ಡ್ ರದ್ದು ಮಾಡುವುದು ಸರಿಯಲ್ಲ. ಅದು ಈ ಕರೋನದ ಸಂದರ್ಭದಲ್ಲಿ ಈ ರೀತಿ ರದ್ದು ಮಾಡುವುದು ಬಡವರ ಹಾಗೂ ಮಧ್ಯಮ ವರ್ಗದವರ ಜೀವನಕ್ಕೆ ಕಷ್ಟ. ಆದ್ದರಿಂದ ದಯವಿಟ್ಟು ಈ ಸಂಕಷ್ಟ ಪರಿಸ್ಥಿತಿಯಲ್ಲಿ ಈ ರೀತಿ ರದ್ದು ಮಾಡುವುದು ಸರಿಯಲ್ಲ.

ಪವನ್ ಕುಮಾರ್ ಶಿರ್ವ
- Advertisement -

Related news

error: Content is protected !!