Saturday, May 18, 2024
spot_imgspot_img
spot_imgspot_img

ಆನ್ ಲೈನ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಬಿಗ್​ ಬಾಸ್​ ಸೀಸನ್​ 8 ಸ್ಪರ್ಧಿ!

- Advertisement -G L Acharya panikkar
- Advertisement -

ಕನ್ನಡ ಬಿಗ್​ ಬಾಸ್​ ಸೀಸನ್​ 8 ಪೂರ್ಣಗೊಂಡು ಹಲವು ದಿನಗಳು ಕಳೆದಿವೆ. ಆದರೂ ಒಂದಲ್ಲಾ ಒಂದು ವಿಚಾರಕ್ಕೆ ಈ ಸ್ಪರ್ಧಿಗಳು ಸುದ್ದಿಯಲ್ಲಿದ್ದಾರೆ. ಈಗ ಬಿಗ್​ ಬಾಸ್​ 8ರ ಸ್ಪರ್ಧಿ ಆನ್​ಲೈನ್​ನಲ್ಲೇ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ಸದ್ಯ, ಈ ಫೋಟೋಗಳು ಸಾಕಷ್ಟು ವೈರಲ್​ ಆಗುತ್ತಿದೆ.

ಈ ಬಾರಿಯ ಬಿಗ್​ ಬಾಸ್​ ಮನೆಗೆ ಮೂವರು ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದಿದ್ದರು. ಅದರಲ್ಲಿ ಪ್ರಿಯಾಂಕಾ ತಿಮ್ಮೇಶ್​ ಹಾಗೂ ವೈಜಯಂತಿ ಅಡಿಗ ಒಂದೇ ದಿನ ಮನೆಗೆ ಎಂಟ್ರಿ ಪಡೆದಿದ್ದರು. ಆದರೆ, ವೈಜಯಂತಿಗೆ ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ದಿನ ಇರೋಕೆ ಸಾಧ್ಯವಾಗಿಲ್ಲ. ಪದೇಪದೇ ಕ್ಯಾಮೆರಾ ಬಳಿ ತೆರಳಿ ನನಗೆ ಇಲ್ಲಿ ಇರೋಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.

ಕೊನೆಗೆ, ವೀಕೆಂಡ್​ನಲ್ಲಿ ಬಿಗ್​ ಬಾಸ್​ ಮನೆಯಿಂದ ಹೊರ ಹೋಗೋಕೆ ವೈಜಯಂತಿಗೆ ಸುದೀಪ್​ ಆಫರ್​ ನೀಡಿದರು. ಈ ಆಫರ್​ಅನ್ನು ಸ್ವೀಕರಿಸಿದರು ವೈಜಯಂತಿ ಅಡಿಗ. ಈ ಮೂಲಕ ಬೆರಳೆಣಿಕೆ ದಿನಗಳಲ್ಲಿ ಅವರು ಮನೆಯಿಂದ ಹೊರ ಬಂದರು. ಇದೀಗ ವೈಜಯಂತಿ ಅಡಿಗ ಅವರು ಪ್ರಿಯಕರ ಸೂರಜ್​ ಜತೆ ಆನ್​ಲೈನ್​ನಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ.

ಈ ಫೋಟೋಗಳನ್ನು ವೈಜಯಂತಿ ಅಡಿಗ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೈಜಯಂತಿ ಕುಟುಂಬ ಕೂಡ ಈ ಎಂಗೇಜ್​ಮೆಂಟ್​ನಲ್ಲಿ ಭಾಗಿಯಾಗಿತ್ತು. ಅವರ ಮದುವೆ ಆಗುವ ಹುಡುಗ ಅಮೆರಿಕದಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ವೈಜಯಂತಿ ಅಡಿಗ ಖ್ಯಾತ ಹೋಟೆಲ್ ಉದ್ಯಮಿ ವಾಸುದೇವ ಅಡಿಗ ಅವರ ಮಗಳು. ‘ಅಮ್ಮಚ್ಚಿ ಎಂಬ ನೆನಪು’ ಸಿನಿಮಾದಲ್ಲಿ ಇವರು ನಟಿಸಿದ್ದರು.

- Advertisement -

Related news

error: Content is protected !!