Monday, July 20, 2026
spot_imgspot_img
spot_imgspot_img

VB-G RAM G ಕಾಯ್ದೆ ಕುರಿತು ಪುತ್ತೂರಿನಲ್ಲಿ ಬೃಹತ್ ಪಾದಯಾತ್ರೆ ಹಾಗೂ ಜನಜಾಗೃತಿ ಸಭೆ

- Advertisement -
- Advertisement -

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ವಿಕಸಿತ ಭಾರತ ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಗ್ಯಾರಂಟಿ (VB-G RAM G) ಕಾಯ್ದೆಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೃಹತ್ ಪಾದಯಾತ್ರೆ ಹಾಗೂ ಜನಜಾಗೃತಿ ಸಭೆಯನ್ನು ಹೀಗೊಂದು ನಿಯೋಜಿಸಲಾಗಿದೆ.


ಈ ಕಾರ್ಯಕ್ರಮವು ಫೆಬ್ರವರಿ 14, 2026 (ಶನಿವಾರ) ಬೆಳಿಗ್ಗೆ 9.30 ಗಂಟೆಗೆ ಉಪ್ಪಿನಂಗಡಿ ಮೇಲ್ಸೇತುವೆ ಬಳಿ ವಿವಿಧ ಮುಖ್ಯ ರಸ್ತೆ ಮುಖಾಂತರ ಪಾದಯಾತ್ರೆಯೊಂದಿಗೆ ಪ್ರಾರಂಭವಾಗಿ ನಂತರ ಪ್ರತಿ ವಿವರಣೆಗಾಗಿ ಜನಜಾಗೃತಿ ಸಭೆ ನಡೆಸಲಾಗುತ್ತದೆ.


ಈ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಚಲುವಾದಿ ನಾರಾಯಣಸ್ವಾಮಿ,
ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಳ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು,
ಪುತ್ತೂರು ವಿದಾನ ಸಭಾ ಕ್ಷೇತ್ರದ ಮಾಜಿ ಶಾಸಕರು ಸಂಜೀವ ಮಠಂದೂರು, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಳಿ ಅಧ್ಯಕ್ಷ ದಯಾನಂದ ಉಳ್ಳಿಪಾಡಿ ಇವರು ಉಪಸ್ಥಿತರಿರಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

- Advertisement -

Related news

error: Content is protected !!