Thursday, July 23, 2026
spot_imgspot_img
spot_imgspot_img

ಮಂಗಳೂರು: ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ ವಾರಂಟ್ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: ಕಳೆದ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ ವಾರಂಟ್ ಅಸಾಮಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಸುಹಾನ್ ಸೋನು (33) ಎಂದು ಗುರುತಿಸಲಾಗಿದ್ದು, ಇವರು ಮಂಗಳೂರು ಅಶೋಕನಗರದ ಬಿರಾ ಪೂಜಾರಿ ಕಂಪೌಂಡ್ ನಿವಾಸಿಯಾಗಿದ್ದಾರೆ.

ಆರೋಪಿತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಅವುಗಳ ವಿವರ ಹೀಗಿವೆ:ಉರ್ವಾ ಪೊಲೀಸ್ ಠಾಣೆ ಅ.ಕ್ರ. 62/2016 – ಕಲಂ 399, 120(B) IPCಉರ್ವಾ ಪೊಲೀಸ್ ಠಾಣೆ ಅ.ಕ್ರ. 126/2017 – ಕಲಂ 120(B), 399, 402, 188 IPCಮಂಗಳೂರು ಉತ್ತರ ಪೊಲೀಸ್ ಠಾಣೆ ಅ.ಕ್ರ. 32/2020 – ಕಲಂ 143, 147, 148, 504, 506, 323, 324 r/w 149 IPCಈ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುಹಾನ್ ಸೋನು ವಿರುದ್ಧ ಉರ್ವಾ ಪೊಲೀಸ್ ಠಾಣೆ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ಎಲ್.ಪಿ.ಸಿ ವಾರಂಟ್ ಹೊರಡಿಸಿತ್ತು.ದಿನಾಂಕ 29-03-2026 ರಂದು ಮಹಾರಾಷ್ಟ್ರ ರಾಜ್ಯದ ಮುಂಬೈನಲ್ಲಿ ಉರ್ವಾ ಪೊಲೀಸ್ ಠಾಣೆಯ ಎಎಸ್‌ಐ ಲಕ್ಷ್ಮಣ್ ಹಾಗೂ ಸಿಬ್ಬಂದಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

- Advertisement -

Related news

error: Content is protected !!