Sunday, May 12, 2024
spot_imgspot_img
spot_imgspot_img

ಕಲ್ಲಂಗಡಿಯಲ್ಲಿದೆ ಕಾಯಿಲೆಗೆ ಮದ್ದು!

- Advertisement -G L Acharya panikkar
- Advertisement -

ಪ್ರತೀದಿನ ಕಲ್ಲಂಗಡಿ ತಿನ್ನುವುದರಿಂದ ಈ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.
ಆಹಾರಕ್ರಮದಲ್ಲಿ ಸೀಸನ್‌ ಫುಡ್ಸ್‌ಗೆ ಪ್ರಾಮುಖ್ಯತೆ ನೀಡುತ್ತೀರಾ? ಇಲ್ಲ ಅಂದರೆ ಇಂದಿನಿಂದಲೇ ಶುರು ಮಾಡಿ. ಸೀಸನ್‌ ಫುಡ್ಸ್‌ (ಆಯಾ ಕಾಲದಲ್ಲಿ ದೊರೆಯುವ ಆಹಾರಗಳು)ನಲ್ಲಿ ಆಯಾ ಕಾಲಕ್ಕೆ ತಕ್ಕಂತೆ ನಮ್ಮ ದೇಹವನ್ನು ರಕ್ಷಣೆ ಮಾಡುವ ಗುಣಗಳಿರುತ್ತದೆ.

ಬೇಸಿಗೆಯಲ್ಲಿ ದೊರೆಯುವ ಎಲ್ಲಾ ಹಣ್ಣುಗಳಲ್ಲಿ ನೀರಿನಂಶ ಅಧಿಕವಿರುತ್ತದೆ ಹಾಗೂ ಉಷ್ಣತೆಯ ವಿರುದ್ಧ ದೇಹವನ್ನು ತಂಪಾಗಿ ಇಡುವ ಗುಣವಿರುತ್ತದೆ. ಅಂತಹ ಹಣ್ಣುಗಳಲ್ಲೊಂದು ಕಲ್ಲಂಗಡಿ. ಪ್ರತೀದಿನ ಕಲ್ಲಂಗಡಿ ತಿನ್ನುವುದರಿಂದ ಈ 9 ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.ಕಲ್ಲಂಗಡಿ ಹಣ್ಣು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಹಾಗೂ ಹೃದಯಾಘಾತಕ್ಕೆ ಕಾರಣವಾಗುವ ಅಥೆರೊಸ್ಕೊರೊಸಿಸ್ ಬೆಳವಣಿಗೆಯನ್ನು ತಡೆಯುತ್ತದೆ. ಕಲ್ಲಂಗಡಿಯಲ್ಲಿ ಪೊಟ್ಯಾಷಿಯಂ ಅಂಶ ಅಧಿಕವಾಗಿದ್ದು ಇದು ಹೈಪರ್‌ ಟೆನ್ಷನ್‌ ಕಡಿಮೆ ಮಾಡುತ್ತದೆ. ಹೈಪರ್‌ ಟೆನ್ಷನ್‌ ಕೂಡ ಹೃದಯಾಘಾತಕ್ಕೆ ಒಂದು ಕಾರಣ.

ವಿಟಮಿನ್ ಬಿ6,ಬಿ1 ಮತ್ತು ಸಿ ಹೇರಳವಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವಲ್ಲಿ ಸಹಾಯಕಾರಿ. ಇದರಲ್ಲಿರುವ ಲುಟಿನ್, ಜಿಯಾಕ್ಸಿಥಿನ್, ಲೈಕೊಪೆನೆ, ಬೀಟಾ ಕೆರೊಟಿನ್, ಕ್ರಿಪ್ಟಾಕ್ಸಿಥಿನ್ ಅಂಶವಿದ್ದು ಇದು DNA ಆರೋಗ್ಯ ಕಾಪಾಡಿ ಕ್ಯಾನ್ಸರ್‌ ರೋಗ ಬರದಂತೆ ತಡೆಯುತ್ತದೆ. ರಾತ್ರಿಗೆ ಅನ್ನದ ಪದಾರ್ಥಗಳನ್ನು ಕಡಿಮೆ ಮಾಡಿ, ಕಲ್ಲಂಗಡಿ ಹಣ್ಣು ತಿನ್ನುವುದರಿಂದ ತೂಕ ಕಡಿಮೆ ಮಾಡುವಲ್ಲಿ ಸಹಕಾರಿ.

ದೇಹದಲ್ಲಿರುವ ಕಶ್ಮಲವನ್ನು ಹೊರಹಾಕುವಲ್ಲಿ ಕಲ್ಲಂಗಡಿ ಸಹಾಯಕಾರಿ.ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು.ಇದರಲ್ಲಿರುವ ಬೀಟಾ ಕೆರೊಟಿನ್‌ ಅನ್ನು ನಮ್ಮ ದೇಹವು ವಿಟಮಿನ್‌ ಎ ಆಗಿ ಪರಿವರ್ತಿಸುತ್ತದೆ. ಇರುಳು ಕುರುಡು, ಕಣ್ಣಿನಲ್ಲಿ ಪೊರೆ ಬರುವುದು ಈ ರೀತಿಯ ಸಮಸ್ಯೆಗಳು ಬರದಂತೆ ತಡೆಯುವಲ್ಲಿ ಸಹಾಯ ಮಾಡುತ್ತದೆ.

ಇದರಲ್ಲಿರುವ ಇಟಮಿನ್‌ ಬಿ6 ಜ್ಞಾಪಕ ಶಕ್ತಿಗೆ ತುಂಬಾ ಒಳ್ಳೆಯದು. ಓದುವ ಮಕ್ಕಳು ತಮ್ಮ ಆಹಾರಕ್ರಮದಲ್ಲಿ ಇದನ್ನು ಸೇರಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುವುದು. ವ್ಯಾಯಾಮದ ನಂತರ ಒಂದು ಪೀಸ್‌ ಕಲ್ಲಂಗಡಿ ತಿಂದರೆ ಹೊಟ್ಟೆ ಹಸಿವು ಕಡಿಮೆಯಾಗುವುದು ಹಾಗೂ ತುಂಬಾ ರಿಲೀಫ್ ಅನಿಸುವುದು.

- Advertisement -

Related news

error: Content is protected !!