Saturday, May 18, 2024
spot_imgspot_img
spot_imgspot_img

ಬ್ಲಾಕ್ ಫಂಗಸ್ ಬೆನ್ನಲ್ಲೇ ಹೆಚ್ಚು ಅಪಾಯಕಾರಿ ‘ವೈಟ್ ಫಂಗಸ್’ ಪ್ರಕರಣಗಳು ಪತ್ತೆ

- Advertisement -G L Acharya panikkar
- Advertisement -

ಬಿಹಾರ: ದೇಶಾದ್ಯಂತ ಹೆಚ್ಚುತ್ತಿರುವ ಕೊರೊನಾ ವೈರಸ್ ಹಾಗೂ ಬ್ಯ್ಲಾಕ್ ಫಂಗಸ್ ಪ್ರಕರಣಗಳ ಮಧ್ಯೆ ಅದಕ್ಕಿಂತಲೂ ಅಪಾಯಕಾರಿ ಎಂದು ಪರಿಗಣಿಸಲಾದ ವೈಟ್ ಫಂಗಸ್ ನ ನಾಲ್ಕು ಪ್ರಕರಣಗಳು ಬಿಹಾರದ ಪಾಟ್ನಾದಲ್ಲಿ ವರದಿಯಾಗಿದ್ದು ಆತಂಕ ಸೃಷ್ಟಿಸಿವೆ.ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಬಿಳಿ ಶಿಲೀಂಧ್ರದಿಂದ ನಾಲ್ಕು ರೋಗಿಗಳು ಪತ್ತೆಯಾಗಿದ್ದಾರೆ.

ಸೋಂಕಿತ ರೋಗಿಗಳಲ್ಲಿ ಪಾಟ್ನಾದ ಒಬ್ಬರು ಪ್ರಸಿದ್ಧ ತಜ್ಞರು ಇದ್ದಾರೆ ಎಂದು ತಿಳಿದುಬಂದಿದೆ. ಆರೋಗ್ಯ ತಜ್ಞರ ಪ್ರಕಾರ, ಬಿಳಿ ಶಿಲೀಂಧ್ರ ಸೋಂಕು ಕಪ್ಪು ಶಿಲೀಂಧ್ರ ಸೋಂಕುಗಿಂತ ಹೆಚ್ಚು ಅಪಾಯಕಾರಿ ಏಕೆಂದರೆ ಇದು ಶ್ವಾಸಕೋಶದ ಜೊತೆಗೆ ದೇಹದ ಇತರ ಭಾಗಗಳಾದ ಬಾಯಿ , ಉಗುರುಗಳು, ಚರ್ಮ, ಹೊಟ್ಟೆ, ಮೂತ್ರಪಿಂಡ, ಮೆದುಳು ಹಾಗೂ ಗುಪ್ತಾಂಗಗಳಿಗೂ ಹರಡಬಹುದು ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಇಲ್ಲಿಯವರೆಗೆ, ಪಾಟ್ನಾದಲ್ಲಿ ಬಿಳಿ ಶಿಲೀಂಧ್ರದ ನಾಲ್ಕು ರೋಗಿಗಳು ಪತ್ತೆಯಾಗಿದ್ದಾರೆ ಎಂದು ಪಿಎಂಸಿಎಚ್‌ನ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಮುಖ್ಯ ವೈದ್ಯ ಎಸ್‌.ಎನ್. ಸಿನ್ಹಾ ಮಾಹಿತಿ ನೀಡಿದ್ದಾರೆ.

ಬಿಳಿ ಶಿಲೀಂಧ್ರವು ಶ್ವಾಸಕೋಶಕ್ಕೂ ಸೋಂಕು ತರುತ್ತದೆ ಮತ್ತು ಸೋಂಕಿತ ರೋಗಿಯ ಮೇಲೆ ಎಚ್‌ಆರ್‌ಸಿಟಿ ನಡೆಸಿದಾಗ ಕೊವೀಡ್ ಗೆ ಹೋಲುವ ಸೋಂಕು ಪತ್ತೆಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ನಾಲ್ಕು ರೋಗಿಗಳಿಗೆ ಕರೋನಾದಂತಹ ಲಕ್ಷಣಗಳು ಕಂಡು ಬಂದಿವೆ. ಆದರೆ ಅವರಿಗೆ ಕೊರೊನಾ ಇರಲಿಲ್ಲ. ಅಲ್ಲದೆ ಕೊರೊನಾಗೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳಿಗೆ ಒಳಪಡಿಸಿದಾಗ ನೆಗೆಟಿವ್ ವರದಿಯೇ ಬಂದಿದೆ. ಬಳಿಕ ಮತಷ್ಟು ತಪಾಸಣೆ ನಡೆಸಿದಾಗ ವೈಟ್ ಫಂಗಸ್ ಸೋಂಕಿಗೆ ಒಳಗಾಗಿದ್ದಾರೆಂದು ತಿಳಿದುಬಂದಿದೆ. ರೋಗನಿರೋಧಕ ಶಕ್ತಿ ಕೊರತೆಯೇ ಇದಕ್ಕೂ ಕಾರಣವಾಗಿದೆ.

- Advertisement -

Related news

error: Content is protected !!