- Advertisement -
- Advertisement -



ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ 2024-25ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವು ಜೂ.30 ನೇ ಆದಿತ್ಯವಾರ ಸಂಜೆ 7.00 ಗಂಟೆಗೆ ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇಲ್ಲಿ ನಡೆಯಲಿದೆ.

ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ ಎರ್ಮಿನಿಲೆ, ಕಾರ್ಯದರ್ಶಿಯಾಗಿ ಶ್ವೇತಾ ರವಿಕುಮಾರ್, ಖಜಾಂಚಿಯಾಗಿ ದಿನಕರ್ ಆಳ್ವ ಇವರ ಪದಗ್ರಹಣ ಕಾರ್ಯಕ್ರಮದಲ್ಲಿ ಪದಾಗ್ರಹಣ ಅಧಿಕಾರಿ ಕುಡ್ಪಿ ಅರವಿಂದ ಶೆಣೈ ಪಿ.ಎಮ್.ಜಿ.ಫ್ ಫಸ್ಟ್ ಡಿಸ್‌ಟಿಕ್ ವೈಸ್ ಚೆರ್‌ಮೆನ್, ಚೀಫ್ ಡಿಸ್‌ಟಿಕ್ ಕೊ-ಆರ್ಡಿನೇಟರ್ ಗ್ಲೋಬಲ್ ಕಾಸಸ್ ಜಗದೀಶ ಕೆ ಯಡಪಡಿತ್ತಾಯ ಎಂಜೆಎಫ್ ಇವರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -