Sunday, June 21, 2026
spot_imgspot_img
spot_imgspot_img

ಕರೋನಾ ತಡೆಗಟ್ಟಲು WHO ಒಪ್ಪಂದ

- Advertisement -
- Advertisement -

ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಭೀಕರ ಕೊರೋನಾ ವೈರಸ್‌‍ನ ಮುಂದಿನ ಪಿಡುಗು ಉದ್ಭವವಾದಲ್ಲಿ ಉತ್ತಮವಾಗಿ ಅದನ್ನು ತಡೆಗಟ್ಟುವ, ಪ್ರತಿಕ್ರಿಯಿಸಲು ಸನ್ನದ್ಧವಾಗುವ ಕುರಿತು ಒಪ್ಪಂದವೊಂದನ್ನು ಅಂಗೀಕರಿಸಿದವು.

ಡಬ್ಲ್ಯೂಹೆಚ್‌ಓದ ವಾರ್ಷಿಕ ಅಸೆಂಬ್ಲಿಯ ಆತಿಥ್ಯ ವಹಿಸಿದ್ದ ಜಿನೀವಾ ಹಾಲ್‌ನಲ್ಲಿ ಮೂರು ವರ್ಷಗಳಿಂದ ರೂಪಿಸಿ ಚರ್ಚಿಸುತ್ತಿದ್ದ ಈ ಒಪ್ಪಂದಕ್ಕೆ ಅವಿರೋಧ ಅಂಗೀಕಾರ ದೊರೆಯಿತು.ವೈರಸ್‌‍ನ ಮಾದರಿ ಕಾಣಿಸಿಕೊಳ್ಳುವ ದೇಶಗಳಲ್ಲಿ ಪರೀಕ್ಷೆಗಳನ್ನು ನಡೆಸುವುದನ್ನು ಔಷಧಿ ಮತ್ತು ಲಸಿಕೆಗಳ ವಿತರಣೆಯನ್ನು ಈ ಒಪ್ಪಂದವು ಖಾತರಿಪಡಿಸುತ್ತದೆ. ಇಂಥ ಉತ್ಪನ್ನಗಳ ಶೇ.20 ರಷ್ಟನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಬಡರಾಷ್ಟ್ರಗಳು ಇವುಗಳನ್ನು ಪಡೆಯವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನೀಡಲಾಗುತ್ತದೆ.ಈ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಸ್‌‍ ಆಧೇನೋಮ್‌ ಘಬ್ರೆಯೇಸುಸ್‌‍ ಅವರು ಹಂಚಿಕೊಂಡ ಮೌಲ್ಯಗಳು ಮತ್ತು ಸಹಕಾರಗಳ ದೃಷ್ಟಿಯಿಂದ ಅನೇಕ ರಾಷ್ಟ್ರಗಳು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿರುವಾಗ ಇದು ಒಂದು ಬಹುಪಕ್ಷೀಯ ಒಪ್ಪಂದವಾಗಿದೆ ಎಂದಿದ್ದಾರೆ.

- Advertisement -

Related news

error: Content is protected !!