Wednesday, May 8, 2024
spot_imgspot_img
spot_imgspot_img

ಓಡಿ ಹೋಗಿ ಮದುವೆಯಾಗಿ ಕೆಲವೇ ದಿನಕ್ಕೆ ಹೆಣವಾದ ಪತ್ನಿ; ಖ್ಯಾತ ಯೂಟ್ಯೂಬರ್ ಅರೆಸ್ಟ್​

- Advertisement -G L Acharya panikkar
- Advertisement -

ಮಹಾರಾಷ್ಟ್ರ: ಜೀತು ಜಾನ್​ ಎಂದೇ ಖ್ಯಾತಿ ಪಡೆದಿರುವ ಜಿತೇಂದ್ರ ಹೆಸರಿನ ಖ್ಯಾತ ಯೂಟ್ಯೂಬರ್​ನನ್ನು ಮಹಾರಾಷ್ಟ್ರ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಅವರ ಪತ್ನಿ ಕೋಮಲ್​ ಅಗರ್​ವಾಲ್​ ಇತ್ತೀಚೆಗೆ ಫ್ಯಾನ್​ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು.

ಇವರ ಸಾವಿಗೆ ಜೀತೇಂದ್ರ ಅವರೇ ಕಾರಣ ಎಂದು ಹುಡುಗಿ ಕುಟುಂಬದವರು ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಅರೆಸ್ಟ್​ ಮಾಡಲಾಗಿದೆ.

ಕೋಮಲ್​ ಇತ್ತೀಚೆಗೆ ನೇಣು ಬಿಗಿದು ಮೃತಪಟ್ಟಿದ್ದರು. ಇದನ್ನು ಪೊಲೀಸರು ಆತ್ಮಹತ್ಯೆ ಎಂದು ಕೇಸ್​ ಕ್ಲೋಸ್​ ಮಾಡಿದ್ದರು. ಆದರೆ, ಕೋಮಲ್ ಅವರ ತಾಯಿ ಜಿತೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಜಿತೇಂದ್ರ ಅವರು ಹಿಂಸೆ ಕೊಡುತ್ತಿದ್ದರು. ಕೋಮಲ್​ ಆತ್ಮಹತ್ಯೆ ಮಾಡಿಕೊಳ್ಳಲು ಅವರೇ ಪ್ರಚೋದನೆ ನೀಡಿದ್ದರು ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಕೋಮಲ್ ತಾಯಿ​ ನೀಡಿದ ದೂರು ಆಧರಿಸಿ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದು, ಜಿತೇಂದ್ರ ಅವರನ್ನು ಅರೆಸ್ಟ್​ ಮಾಡಲಾಗಿದೆ. ‘ನನ್ನ ಅಕ್ಕನಿಗೆ ಆತ ಸಾಕಷ್ಟು ಚಿತ್ರ ಹಿಂಸೆ ಕೊಡುತ್ತಿದ್ದ. ಆತನೇ ಆಕೆಯನ್ನು ಕೊಲೆ ಮಾಡಿರಬಹುದು’ ಎಂದು ಕೋಮಲ್​ ಸಹೋದರಿ ಪ್ರಿಯಾ ಆರೋಪಿಸಿದ್ದಾರೆ.

ಸದ್ಯ, ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಕೋಮಲ್​ ಹಾಗೂ ಜಿತೇಂದ್ರ ಕೆಲ ತಿಂಗಳು ಪರಸ್ಪರ ಪ್ರೀತಿಸಿದ್ದರು. ಇವರ ಮದುವೆಗೆ ಕೋಮಲ್​ ಮನೆಯವರ ಒಪ್ಪಿಗೆ ಇರಲಿಲ್ಲ. ಹೀಗಾಗಿ, ಮಾರ್ಚ್​ 4ರಂದು ಜಿತೇಂದ್ರ ಜತೆಗೆ ಓಡಿ ಹೋಗಿ ಕೋಮಲ್​ ಮದುವೆ ಆಗಿದ್ದರು. ಈಗ ಅವರ ಸಾವು ಸಾಕಷ್ಟು ಅನುಮಾನ ಹುಟ್ಟುಹಾಕಿದೆ.

- Advertisement -

Related news

error: Content is protected !!