Saturday, April 20, 2024
spot_imgspot_img
spot_imgspot_img

ಹೊಸ ವೈಶಿಷ್ಟ್ಯದೊಂದಿಗೆ ವಿಂಡೋಸ್ 11 ಅನಾವರಣಗೊಳಿಸಿದ ಮೈಕ್ರೋಸಾಫ್ಟ್

- Advertisement -G L Acharya panikkar
- Advertisement -

ಮೈಕ್ರೋಸಾಫ್ಟ್ ಕಂಪೆನಿಯು ಹೊಸ ವಿಂಡೋಸ್ 11 ಅನ್ನು ಎಲ್ಲ ಹೊಸ ಯೂಸರ್ ಇಂಟರ್​ಫೇಸ್​ (ಯುಐ) ಜೊತೆಗೆ ಅನಾವರಣಗೊಳಿಸಿದೆ ಮತ್ತು ಆಪರೇಟಿಂಗ್ ಸಿಸ್ಟಮ್ ವಿನ್ಯಾಸದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಮಾಡಿದೆ. ಕಂಪೆನಿಯು ವಿಂಡೋಸ್ 10 ಅನ್ನು ಬಿಡುಗಡೆ ಮಾಡಿದ ಆರು ವರ್ಷಗಳ ನಂತರ ಈ ಹೊಸ ಅಪ್​ಡೇಟ್ ಬರುತ್ತಿದೆ.

ಹೊಸ ವಿಂಡೋಸ್ 11 ಲೈವ್ ಟೈಲ್ಸ್ ಇಲ್ಲದೆ ಹೊಸ ಸ್ಟಾರ್ಟ್ ಮೆನು ಮತ್ತು ಟಾಸ್ಕ್ ಬಾರ್‌ನಲ್ಲಿ ಐಕಾನ್‌ಗಳ ಹೊಸ ಪೊಸಿಷಿನಿಂಗ್​ ಪಡೆಯುತ್ತದೆ. ಈಗ ಪರಿಚಯಿಸಲಾದ ಹೊಸ ಬದಲಾವಣೆಗಳು ವಿಂಡೋಸ್ 10X ಅನ್ನು ಹೋಲುತ್ತವೆ.ಮೈಕ್ರೋಸಾಫ್ಟ್ ಹೊಸ ಅಪ್ಲಿಕೇಶನ್‌ ಸ್ಟೋರ್​ನೊಂದಿಗೆ ಅಪ್ಲಿಕೇಷನ್‌ಗಳತ್ತ ತನ್ನ ಗಮನವನ್ನು ನವೀಕರಿಸಿದೆ.

ಅಂದ ಹಾಗೆ ಹೊಸ ಓಎಸ್ (ಆಪರೇಟಿಂಗ್ ಸಿಸ್ಟಮ್​) ವಿಜೆಟ್‌ಗಳೊಂದಿಗೆ ಉತ್ತಮ ಹೊಂದಾಣಿಕೆ ತರುತ್ತದೆ. ಸಿಸ್ಟಮ್-ವೈಡ್ ಡಾರ್ಕ್ ಮತ್ತು ಲೈಟ್ ಮೋಡ್‌ಗಳನ್ನು ಸಹ ಈ ಆಪರೇಟಿಂಗ್ ಸಿಸ್ಟಮ್ ಪಡೆಯುತ್ತದೆ. ವಿಂಡೋಸ್ 11ರಲ್ಲಿನ ಹೊಸ ಆ್ಯಪ್ ಸ್ಟೋರ್ ಅಮೆಜಾನ್ ಆ್ಯಪ್ ಸ್ಟೋರ್ ಮೂಲಕ ಆಂಡ್ರಾಯ್ಡ್ ಅಪ್ಲಿಕೇಷನ್‌ಗಳನ್ನು ಸಹ ಸಪೋರ್ಟ್ ಮಾಡುತ್ತದೆ.

ಸ್ನ್ಯಾಪ್ ಲೇಔಟ್ಸ್​ ಎಂಬ ಹೊಸ ವೈಶಿಷ್ಟ್ಯದೊಂದಿಗೆ ಬಳಕೆದಾರರು ಪಿಕ್ಚರ್-ಇನ್-ಪಿಕ್ಚರ್ ಮೋಡ್‌ಗೆ ಹೋಲುವ ಸ್ಮಾರ್ಟ್‌ಫೋನ್ ಸ್ವರೂಪದಲ್ಲಿ ಅಪ್ಲಿಕೇಷನ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ.

ವ್ಯವಹಾರದ ಉದ್ದೇಶಗಳಿಗೆ ಬಳಸುವ ಬಳಕೆದಾರರಿಗಾಗಿ ಅಂತಲೇ ರೂಪಿಸಲಾಗಿದ್ದು, ಹೊಸ ವೈಶಿಷ್ಟ್ಯಗಳೊಂದಿಗೆ ವಿಂಡೋಸ್ 11 ಬರಲಿದೆ. ನಿರ್ದಿಷ್ಟವಾಗಿ ಆಪರೇಟಿಂಗ್ ಸಿಸ್ಟಮ್ ಬಾಹ್ಯ ಮಾನಿಟರ್ ಹೊಂದಿರುವವರಿಗಾಗಿಯೇ ರೂಪುಗೊಂಡಿದೆ ಎಂದು ಸಾಫ್ಟ್‌ವೇರ್ ಕಂಪೆನಿ ಮೈಕ್ರೋಸಾಫ್ಟ್ ಹೇಳಿಕೊಂಡಿದೆ.

ಉದಾಹರಣೆಗೆ, ತುಂಬ ನಿಶ್ಶಬ್ದವಾದ ಕೋಣೆಗೆ ತೆರಳಿ, ಕಾಲ್ ತೆಗೆದುಕೊಳ್ಳುವಾಗ ಆಪರೇಟಿಂಗ್ ಸಿಸ್ಟಮ್ ತಾನಾಗಿಯೇ ಸಿಂಗಲ್ ಸ್ಕ್ರೀನ್​ಗೆ ಆ್ಯಪ್​ಗಳನ್ನು ಅಡ್ಜಸ್ಟ್​ ಮಾಡುತ್ತದೆ. ಅದೇ ಮಷೀನ್​ ಅನ್ನು ಬಳಕೆದಾರರು ಬೇರೆಡೆ ತೆಗೆದುಕೊಂಡು ಹೋದಾಗ ಮಷೀನ್ ಪುನರ್ ಹೊಂದಾಣಿಕೆ ಆಗುತ್ತದೆ.

- Advertisement -

Related news

error: Content is protected !!