Sunday, August 9, 2026
spot_imgspot_img
spot_imgspot_img

ಬೆಂಗಳೂರಿಗೆ ಯುವತಿಯರ ಕಳ್ಳ ಸಾಗಾಟ- ಆರೋಪಿ ಪೊಲೀಸ್ ವಶಕ್ಕೆ

- Advertisement -
- Advertisement -

ಕೋಲ್ಕತ್ತಾ: ಬಾಂಗ್ಲಾ ದೇಶದ ಇಬ್ಬರು ಯುವತಿಯರನ್ನು ಬೆಂಗಳೂರಿಗೆ ಕಳ್ಳ ಸಾಗಾಟ ಮಾಡಲು ನಡೆಸಿದ ಪ್ರಯತ್ನವನ್ನು ಕೋಲ್ಕತ್ತಾ ಪೊಲೀಸರು ವಿಫಲಗೊಳಿಸಿದ್ದಾರೆ.

ಯುನಿಸೆಫ್ ಹಿರಿಯ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಯುವತಿಯರನ್ನು ರಕ್ಷಿಸಲಾಗಿದೆ. ಬಂಧಿತ ಆರೋಪಿಯನ್ನು ರಫೀಕುಲ್ಲ್ ಇಸ್ಲಾಂ ಎಂದು ಗುರುತಿಸಲಾಗಿದೆ.

ಬಾಂಗ್ಲಾದಿಂದ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಇಬ್ಬರು ಯುವತಿಯರನ್ನು ಬೆಂಗಳೂರಿಗೆ ಕರೆದೊಯ್ಯಲು ಯತ್ನಿಸುತ್ತಿದ್ದ ವೇಳೆ ರಕ್ಷಿಸಲಾಗಿದೆ. ಯುನಿಸೆಫ್ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಕೋಲ್ಕತ್ತಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!