Thursday, April 25, 2024
spot_imgspot_img
spot_imgspot_img

ಮಹಿಳೆಯರಿಗಾಗಿಯೇ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ ಲಾಂಚ್ ಮಾಡಿದ ನೀತಾ ಅಂಬಾನಿ

- Advertisement -G L Acharya panikkar
- Advertisement -

ಮುಂಬೈ: ಮಹಿಳಾ ದಿನಾಚರಣೆ ಹಿನ್ನೆಲೆ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮಹಿಳೆಯರಿಗಾಗಿಯೇ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಒಂದನ್ನ ಲಾಂಚ್ ಮಾಡಿದ್ದಾರೆ. ಈ ಪ್ಲಾಟ್​ಫಾರ್ಮ್​ಗೆ ಹರ್ ಸರ್ಕಲ್ ಎಂದು ಹೆಸರಿಡಲಾಗಿದೆ.

ಈ ಸೋಷಿಯಲ್ ಮೀಡಿಯಾ ವೇದಿಕೆಯನ್ನು ಸದ್ಯ ಭಾರತೀಯ ಮಹಿಳೆಯರನ್ನೇ ಗಮನದಲ್ಲಿಟ್ಟುಕೊಂಡು ರಚಿಸಲಾಗಿದ್ದರೂ ವಿಶ್ವದಾದ್ಯಂತ ಮಹಿಳೆಯರು ಈ ಪ್ಲಾಟ್​ಫಾರ್ಮ್​ಗೆ ಸೇರಬಹುದಾಗಿದೆ.

ಮಹಿಳೆಯರಿಗೆ ಸಹಾಯವಾಗುವಂಥ ವಿಡಿಯೋ, ಆರ್ಟಿಕಲ್​ಗಳು, ಸಮಸ್ಯೆಗಳನ್ನ ಬಗೆಹರಿಸುವಂಥ ತಂತ್ರಗಳು, ಆರೋಗ್ಯ, ಹಣಕಾಸು, ಬ್ಯೂಟಿ, ಫ್ಯಾಷನ್, ಪರ್ಸನಾಲಿಟಿ ಡೆವಲೆಪ್​ಮೆಂಟ್​ನಂಥ ವಿಚಾರಗಳನ್ನು ಹಂಚಿಕೊಳ್ಳಲು ಅಥವಾ ತಿಳಿದುಕೊಳ್ಳುವ ಒಟ್ಟು ವೇದಿಕೆಯಾಗಿದೆ ಎಂದು ಪ್ಲಾಟ್​ ಫಾರ್ಮ್ ತನ್ನ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಈ ವೆಬ್​ಸೈಟ್ ಡೆಸ್ಕ್​ಟಾಪ್ ಮತ್ತು ಮೊಬೈಲ್ ವರ್ಷನ್​ನಲ್ಲಿ ಲಭ್ಯವಿದ್ದು ಆ್ಯಪ್ ರೂಪದಲ್ಲಿ ಉಚಿತವಾಗಿ ಗೂಗಲ್​ ಪ್ಲೇ ಮತ್ತು ಮೈ ಜಿಯೋ ಆ್ಯಪ್ ಸ್ಟೋರ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರಾರಂಭಿಕವಾಗಿ ಇಂಗ್ಲೀಷ್ ಭಾಷೆಯಲ್ಲಿ ಈ ವೆಬ್​ಸೈಟ್ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲೂ ಲಭ್ಯವಾಗಲಿದೆಯೆಂದು ತಿಳಿಸಿದ್ದಾರೆ.

- Advertisement -

Related news

error: Content is protected !!