- Advertisement -
- Advertisement -
ಕಾಬೂಲ್, ಎ.4: ಅಫ್ಘಾನಿಸ್ತಾನದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಒಂದೇ ಕುಟುಂಬದ 8 ಮಂದಿ ಸಹಿತ 12 ಮಂದಿ ಮೃತಪಟ್ಟಿದ್ದು ನಾಲ್ಕು ಮಂದಿ ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.ಈಶಾನ್ಯ ಬಡಾಕ್ಷನ್ ಪ್ರಾಂತದಲ್ಲಿ ಭೂಕಂಪ ಕೇಂದ್ರೀಕೃತಗೊಂಡಿತ್ತು. ಕಾಬೂಲ್, ಪಂಜ್‌ಶಿರ್, ಲೊಗಾರ್, ನಂಗರ್ಹರ್, ಲಫ್ಘಾನ್ ಮತ್ತು ನುರಿಸ್ತಾನ್ ಪ್ರಾಂತಗಳಲ್ಲಿ 5 ಮನೆಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು 33 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕಾಬೂಲ್ ಪ್ರಾಂತದ ಗೊಸ್ಸಾಂಡ್ ದಾರಾ ಪ್ರದೇಶದಲ್ಲಿ ಒಂದೇ ಕುಟುಂಬದ 8 ಸದಸ್ಯರು ಮೃತಪಟ್ಟಿದ್ದು, 2 ವರ್ಷದ ಮಗು ಗಾಯಗೊಂಡಿದೆ.ಕಾಬೂಲ್‌ನ ಪಶ್ಚಿಮ ಪ್ರದೇಶದಲ್ಲಿ ಮನೆಯೊಂದು ಕುಸಿದುಬಿದ್ದು ನಾಲ್ವರು ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ರೆಡ್‌ಕ್ರೆಸೆಂಟ್ ಸೊಸೈಟಿಯ ವಕ್ತಾರರನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
- Advertisement -








