ವಿಟ್ಲ: ಪ್ರಕೃತಿ, ಪಕ್ಷಿ ವೀಕ್ಷಣೆ ಹಾಗೂ ಛಾಯಾಗ್ರಹಣ ಪ್ರಿಯರನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸುವ ವಿಶೇಷ ಕಾರ್ಯಕ್ರಮವು ಜೂನ್ 14ರಂದು ವಿಟ್ಲದಲ್ಲಿ ನಡೆಯಲಿದೆ.
ಪಿ. ರಾಧಾಕೃಷ್ಣ ಪೈ ಅವರ 60ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿರುವ ಈ ಸಮಾರಂಭದಲ್ಲಿ ಪ್ರಕೃತಿ, ಪಕ್ಷಿ ವೀಕ್ಷಣೆ ಹಾಗೂ ಛಾಯಾಗ್ರಹಣ ಕುರಿತ ವಿಶೇಷ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಲಿದೆ. ಇದೇ ಸಂದರ್ಭದಲ್ಲಿ ರಾಧಾಕೃಷ್ಣ ಪೈ ಅವರು ಕ್ಲಿಕ್ಕಿಸಿದ ಪಕ್ಷಿ-ಪ್ರಾಣಿ ಹಾಗೂ ನಿಸರ್ಗದ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವೂ ನಡೆಯಲಿದೆ.ಪ್ರಕೃತಿ ಮತ್ತು ಪಕ್ಷಿ ವೀಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಪಿ. ರಾಧಾಕೃಷ್ಣ ಪೈ ಅವರ 60ನೇ ಜನ್ಮದಿನಾಚರಣೆಯ ಅಂಗವಾಗಿ ಫಲಿಮಾರ್ ವಿಠಲ ಪೈ ಸಭಾಭವನದಲ್ಲಿ ವಿಶೇಷ ಸಮಾರಂಭ ಆಯೋಜಿಸಲಾಗಿದ್ದು, ಆ ಸಂದರ್ಭದಲ್ಲಿ ಪ್ರಕೃತಿ, ಪಕ್ಷಿ ವೀಕ್ಷಣೆ ಹಾಗೂ ಛಾಯಾಗ್ರಹಣ ಕುರಿತು ವಿಶೇಷ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.ಇದೇ ವೇಳೆ ರಾಧಾಕೃಷ್ಣ ಪೈ ಅವರು ಕ್ಲಿಕ್ಕಿಸಿದ ಪಕ್ಷಿ, ಪ್ರಾಣಿ ಹಾಗೂ ನಿಸರ್ಗದ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವೂ ಜರುಗಲಿದೆ. ಕಾರ್ಯಕ್ರಮದಲ್ಲಿ ಹಿತಚಿಂತಕರು, ಅಧ್ಯಾಪಕರು, ಮಾರ್ಗದರ್ಶಕರು ಹಾಗೂ ಕುಟುಂಬದ ಹಿರಿಯರು ಭಾಗವಹಿಸಿ ಶುಭ ಹಾರೈಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಿಎ. ಕೆ. ಉಲ್ಲಾಸ್ ಕಾಮತ್ (ಫೌಂಡರ್ ಯುಕೆ & ಕೋ., ಬೆಂಗಳೂರು), ಅನಂತಕೃಷ್ಣ ಹೆಬ್ಬಾರ್ (ಸಾರಂಗ ವಿಟ್ಲ), ಜಯಪ್ರಕಾಶ್ ವಿ. (ಸೀನಿಯರ್ ಸಿವಿಲ್ ಜಡ್ಜ್ ಹಾಗೂ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್, ಸಕಲೇಶಪುರ), ಜೇಸಿ HGF ಶ್ರೀಧರ್ ಕೊಡಕ್ಕಲ್ (ಜೆಸಿಐ ಇಂಡಿಯಾದ ಹಿರಿಯ ತರಬೇತುದಾರ, ಬರಹಗಾರ ಹಾಗೂ ಪ್ರಕಾಶಕ) ಹಾಗೂ ಡಾ. ಅರುಂಧತಿ ಧಾರೇಶ್ವರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಜೂ 15 ಮತ್ತು 16 ಕ್ಕೆ ಸಾರ್ವಜನಿಕ ವೀಕ್ಷಣೆಗೆ ಆವಕಾಶವಿದೆ ಎಂದು ತಿಳಿಸಿದ್ದಾರೆ.








