- Advertisement -
- Advertisement -



ವಿಟ್ಲ: ಯಕ್ಷಭಾರತ ಸೇವಾ ಪ್ರತಿಷ್ಠಾನ ವಿಟ್ಲ ಇದರ 12ನೇ ವರ್ಷದ ಯಕ್ಷೋತ್ಸವ ಕಾರ್ಯಕ್ರಮ ಚಂದಳಿಕೆ ಭಾರತ ಆಡಿಟೋರಿಯಂ ನಲ್ಲಿ ನಡೆಯಿತು.
ಕೃಷ್ಣಯ್ಯ ಕೆ ವಿಟ್ಲ ಅರಮನೆ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ ಗಾಯತ್ರಿ ಗೀತಪ್ರಕಾಶ್, ಡಾ.ರಾಜಾರಾಮ ಬಲಿಪಗುಳಿ-ಇಕೋವಿಷನ್, ರೋಟರಿ ವಲಯ 4 ರ ಅಸಿಸ್ಟೆಂಟ್ ಗವರ್ನರ್ ಡಾ. ರಾಜಾರಾಂ ಕೆ, ಪಟ್ಲ ಫೌಂಡೇಶನ್ ವಿಟ್ಲ ಘಟಕ ಅಧ್ಯಕ್ಷ ಪೂವಪ್ಪ ಶೆಟ್ಟಿ ಅಳಿಕೆ, ಪ್ರಭಾವತಿ ಸಂಜೀವ ಇವರು ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ದಯಾಲ್, ಹಿರಿಯ ಯಕ್ಷಗಾನ ಕಲಾವಿದ ಉಮೇಶ್ ಶೆಟ್ಟಿ ಉಬರಡ್ಕ ಮತ್ತು ಪ್ರಗತಿಪರ ಕೃಷಿಕ ರಾಜೀವ ಗೌಡ ಕಾಯರ್ ಮಾರ್ ಇವರನ್ನು ಸನ್ಮಾನಿಸಲಾಯಿತು.
ಯಕ್ಷಭಾರತ ಪ್ರತಿಷ್ಠಾನದ ಸಂಚಾಲಕ ಸಂಜೀವ ಪೂಜಾರಿ ಸ್ವಾಗತಿಸಿದರು. ಜತೆಕಾರ್ಯದರ್ಶಿ ಪುನೀತಾ ಸತೀಶ್ ವರದಿ ವಾಚಿಸಿ, ಕಾರ್ಯದರ್ಶಿ ನಟೇಶ್ ವಂದಿಸಿದರು. ವಿಶ್ವನಾಥ ಗೌಡ ನಿರೂಪಿಸಿದರು. ರಾಧಾಕೃಷ್ಣ ಎರುಂಬು ಮತ್ತು ರಮೇಶ್ ಬಿ.ಕೆ ಸಹಕರಿಸಿದರು.
- Advertisement -








