Monday, April 19, 2021
spot_imgspot_img
spot_imgspot_img

ಯಲ್ಲಾಪುರ : ಟ್ಯಾಂಕರ್​​​-ಸ್ಕೂಟರ್​ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ತಂದೆ-ಮಗಳು ಸಾವು.

ಕಾರವಾರ: ಸ್ಕೂಟರ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.

ವಿನೋದ್ ಕಿಂದಳಕರ್ (56) ಹಾಗೂ ಅವರ ಮಗಳು ಸುನೇಹಾ ಕಿಂದಳಕರ್ (12) ಮೃತ ದುರ್ದೈವಿಗಳು. ಅರಬೈಲ್​ ಘಟ್ಟದ ರಾಷ್ಟ್ರೀಯ ಹೆದ್ದಾರಿಯ ತಿರುವೊಂದರಲ್ಲಿ ಟ್ಯಾಂಕರ್​ ಹಾಗೂ ಸ್ಕೂಟರ್​ ನಡುವೆ ಈ ಭೀಕರ ಅಪಘಾತ ಸಂಭವಿಸಿದ್ದು, ಟ್ಯಾಂಕರ್​ ಗುದ್ದಿದ ರಭಸಕ್ಕೆ ಬಾಲಕಿಯ ದೇಹ ಛಿದ್ರಗೊಂಡಿದೆ.

ಮಗಳನ್ನು ಯಲ್ಲಾಪುರದಿಂದ ತಮ್ಮ ಸ್ವಂತ ಊರಾದ ಅಂಕೋಲಾ ತಾಲೂಕಿನ ಹಾರವಾಡಾಕ್ಕೆ ಬಿಡಲು ತಂದೆ ಹೊರಟಿದ್ದರು ಎನ್ನಲಾಗಿದೆ. ಯಲ್ಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

MOST POPULAR

HOT NEWS

Related news

error: Content is protected !!