- Advertisement -
- Advertisement -




2022-23ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ sslc ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಯಶಾ ರೈ 590 ಅಂಕ ಹಾಗೂ ವಿಠಲ್ ಜೇಸಿಐ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಭುವನ್ ರೈ 594 ಅಂಕಗಳನ್ನು ಗಳಿಸಿ ವಿಶಿಷ್ಟ ಸಾಧನೆಗೈದಿದ್ದಾರೆ.
ಶ್ರೀಮತಿ ಮತ್ತು ಶ್ರೀ ಕುಂಬ್ರ ದುರ್ಗಾಪ್ರಸಾದ್ ರೈರವರ ಪುತ್ರಿ ಯಶಾ ರೈ ಹಾಗೂ ಶ್ರೀಮತಿ ಮತ್ತು ಶ್ರೀ ಕುಂಬ್ರ ವಿನೋದ್‌ಪ್ರಸಾದ್ ರೈ ರವರ ಪುತ್ರ ಭುವನ್ ರೈ.
ಕುಂಬ್ರ ತರವಾಡು ಮನೆಯ ಇಬ್ಬರು ವಿದ್ಯಾರ್ಥಿಗಳಿಗೆ ಕುಟುಂಬದ ಯಜಮಾನರಾದ ಕೆ.ಎನ್ ವಿಠಲ್ ಶೆಟ್ಟಿ ರವರು ಕುಟುಂಬಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
- Advertisement -