Friday, September 4, 2026
spot_imgspot_img
spot_imgspot_img

ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ)ಯ ಚರಂಡಿ ಯೋಜನೆಗೆ ತೋಡಿದ ಆಳದ ಗುಂಡಿಗೆ ಬಿದ್ದು ಯುವಕ ಮೃತ್ಯು

- Advertisement -
- Advertisement -

ಇಡುಕ್ಕಿ: ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ)ಯ ಚರಂಡಿ ಯೋಜನೆಗೆ ತೋಡಿದ ಆಳದ ಗುಂಡಿಗೆ ಬೈಕ್‌ನೊಂದಿಗೆ ಬಿದ್ದ 27 ವರ್ಷದ ಯುವಕ ಮೃತಪಟ್ಟಿದ್ದಾನೆ.

ತೊಡುಪುಝ ಸಮೀಪ ಮುತ್ತಲಕೋಡಂನಲ್ಲಿ ರಸ್ತೆಯುದ್ದಕ್ಕೂ ಚರಂಡಿ ನಿರ್ಮಿಸಲು ತೋಡಲಾದ ತೆರೆದ ಗುಂಡಿಗೆ ಯುವಕ ಸೋಮವಾರ ರಾತ್ರಿ 11 ಗಂಟೆಗೆ ಬಿದ್ದಿದ್ದಾನೆ. ಮೃತಪಟ್ಟ ಯುವಕನನ್ನು ಜೈಸ್ ಬೆನ್ನಿ ಎಂದು ಗುರುತಿಸಲಾಗಿದೆ. ಈತ ಮುತ್ತಲಕೋಡಂನ ನಿವಾಸಿ.

ಒಂದು ತಿಂಗಳಿಗೂ ಹೆಚ್ಚು ಕಾಲ ಗುಂಡಿ ತೆರೆದೇ ಇತ್ತು ಎಂದು ನಿವಾಸಿಗಳು ಆರೋಪಿಸಿದ್ದಾರೆ. ಗುಂಡಿ ಮುಚ್ಚವಂತೆ ಅಧಿಕಾರಿಗಳಿಗೆ ಮತ್ತೆ ಮತ್ತೆ ದೂರು ನೀಡಿದರೂ ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಗುಂಡಿ ಮುಚ್ಚವಂತೆ ಅಧಿಕಾರಿಗಳಿಗೆ ಮತ್ತೆ ಮತ್ತೆ ದೂರು ನೀಡಿದರೂ ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ನಿರ್ಮಾಣ ಸ್ಥಳದಲ್ಲಿ ಎಚ್ಚರಿಕೆಯ ಬೋರ್ಡ್ ಅಥವಾ ಪ್ರತಿಫಲಕ, ಬ್ಯಾರಿಕೇಡ್ ಸೇರಿದಂತೆ ಮೂಲಭೂತ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ನಿವಾಸಿಗಳು ಪ್ರತಿಪಾದಿಸಿದ್ದಾರೆ.

“ಸುರಕ್ಷತಾ ವ್ಯವಸ್ಥೆಗಳು ಹಾಗೂ ಎಚ್ಚರಿಕೆ ಫಲಕಗಳು ಇಲ್ಲದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರತಿಬಂಬಿಸುತ್ತದೆ. ಇದು ಯುವಕನ ಸಾವಿಗೆ ಕಾರಣವಾಗಿದೆ” ಎಂದು ಸ್ಥಳೀಯ ವ್ಯಾಪಾರಿ ಸುಜೀಶ್ ಕುಮಾ‌ರ್ ತಿಳಿಸಿದ್ದಾರೆ.

- Advertisement -

Related news

error: Content is protected !!