Sunday, June 21, 2026
spot_imgspot_img
spot_imgspot_img

ಮಹಾಮಾರಿ ಡೆಂಗ್ಯೂ ಗೆ ಯುವತಿ ಬಲಿ..!

- Advertisement -
- Advertisement -

ಬಳ್ಳಾರಿ: ರಾಜ್ಯಾದ್ಯಂತ ಡೆಂಘೀ ಹಾವಳಿ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಇದೀಗ, ಮಹಾಮಾರಿ ಡೆಂಗ್ಯೂಗೆ ರಾಜ್ಯದಲ್ಲಿ ಮತ್ತೋರ್ವ ಯುವತಿ ಬಲಿಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಈ ಮೂಲಕ ಸಾವಿನ ಸಂಖ್ಯೆ 9 ಕ್ಕೇರಿಕೆಯಾಗಿದೆ.

ಮೃತಪಟ್ಟ ಯುವತಿ ರೇಖಾ (19) ಎಂದು ಗುರುತಿಸಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ನಾಮಕರಣ ಶಾಸ್ತ್ರ ಕಾರ್ಯಕ್ರಮಕ್ಕೆ ಬಳ್ಳಾರಿಗೆ ತೆರಳಿದ್ದರು. ಅಲ್ಲಿ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು, ನಂತರ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಯುವತಿಗೆ ಶಂಕಿತ ಡೆಂಗ್ಯೂ ಜ್ವರವಿತ್ತು ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Related news

error: Content is protected !!