Monday, April 29, 2024
spot_imgspot_img
spot_imgspot_img

ಐಟಿ ಸಂಸ್ಥೆ ಮಹಿಳಾ ಟೆಕ್ಕಿಯ ಹತ್ಯೆ; ಪ್ರಿಯಕರ ಅರೆಸ್ಟ್…!

- Advertisement -G L Acharya panikkar
- Advertisement -

ಐಟಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿಯನ್ನು ಆಕೆಯ ಪ್ರಿಯತಮನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಜ.28ರಂದು ಬೆಳಗ್ಗೆ ಲಕ್ಷ್ಮಿ ನಗರದ ಹಿಂಜೆವಾಡಿ ಪ್ರದೇಶದಲ್ಲಿರುವ ಹೋಟೆಲ್‌ ಕೊಠಡಿಯಲ್ಲಿ ತಲೆಗೆ ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಮೃತ ಯುವತಿಯನ್ನು ವಂದನಾ ದ್ವಿವೇದಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ರಿಷಬ್ ನಿಗಮ್ ಎಂದು ಗುರುತಿಸಲಾಗಿದೆ. ರಿಷಬ್‌ ಉತ್ತರ ಪ್ರದೇಶದ ಲಕ್ನೋ ನಿವಾಸಿಯಾಗಿದ್ದು, ಕೊಲೆ ಮಾಡಿ ಮುಂಬೈಗೆ ಎಸ್ಕೇಪ್‌ ಆಗುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ತಿಳಿಸಿದ್ದಾರೆ.

ವಂದನಾ ಶನಿವಾರ ತನ್ನ ಪ್ರಿಯಕರನೊಂದಿಗೆ ಹೋಟೆಲ್‌ಗೆ ಬಂದಿದ್ದಳು. ಮೃತ ಯುವತಿ ಹಾಗೂ ಆರೋಪಿ ರಿಷಬ್‌ ಕಳೆದ 10 ವರ್ಷಗಳಿಂದಲೂ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಇಬ್ಬರ ನಡುವೆ ವೈಯಕ್ತಿಕ ಕಾರಣಗಳಿಗೆ ಜಗಳವಾಗಿತ್ತು. ವಂದನಾ ನಡವಳಿಕೆಯ ಬಗ್ಗೆ ಸಂಶಯ ಪಟ್ಟಿದ್ದ ರಿಷಬ್‌ ಆಕೆಯನ್ನು ಕೊಲ್ಲಲ್ಲು ಸ್ಕೆಚ್‌ ಹಾಕಿದ್ದ. ಭಾನುವಾರವೂ ಇಬ್ಬರ ನಡುವೆ ಜಗಳ ನಡೆಯುತ್ತಿದ್ದಾಗಲೇ ರಿಷಬ್‌, ವಂದನಾ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!